Wednesday, December 24, 2008

ಆ ಮೋಡದ ತುದಿಯಿಂದ ನಿನ್ನ ನಗಿಸುವ ಆಸೆ!

ಅನುರೂಪದ ಗೆಳತಿ,

ನಿನಗಿದು ಎಷ್ಟನೇ ಪತ್ರ? ನನಗೆ ನೆನಪಿಲ್ಲ! ನನ್ನ ನೆನಪಿನ ತುಂಬಾ ನಿನ್ನದೇ ಒಲವಿನ ಬಿಂಬ. ನನ್ನಂಥ ಹುಂಬನ ಕೈಗೆ ಸಿಗಲು ಅಮೋಘ ಹದಿನಾರು ವರ್ಷ ಕಾಯಬೇಕಾಯಿತಲ್ಲ ಹುಡುಗಿ,ಎಲ್ಲಿದ್ದೆ ಇಲ್ಲಿಯ ತನಕ?! ಹಾದಿ ತಪ್ಪಿದ ದಾರಿಯಲ್ಲಿ ಒಂದು ಕನಕ ಬಳ್ಳಿ ಕಾಲಿಗೆ ತೊಡವಿಕೊಂಡಂತೆ.ಇಂಥಹ ದಾರಿಯಲ್ಲಿ ನಿನ್ನೊಡನೆ ನೂರು ಬಾರಿ ಜಾರಿ ಬಿಡುತ್ತೇನೆ,ಒಂದು ಅನಿಶ್ಚಿತ ಗವಿಯೊಳಗೆ!

ನಮ್ಮಿಬ್ಬರ ಸ್ನೇಹಕ್ಕೆ,ಬಾಂಧವ್ಯಕ್ಕೆ ಪ್ರೀತಿ ಎಂದು ಹೆಸರಿಟ್ಟವರು ಯಾರು? ನಮ್ಮದು,ಪ್ರೀತಿಗೂ ಮೀರಿದ ಸ್ನೇಹ ಅಥವಾ ಸ್ನೇಹಕ್ಕೂ ಮೀರಿದ ಪ್ರೀತಿ! ನಿನ್ನ ಸ್ನೇಹವೇ ನನಗೆ ಅನುಭೂತಿ!ಒಂದು ಭಾವ ಝರಿಯಲ್ಲಿ ತೀಲಿಹೊಗಿದ್ದೇನೆ.ನೀನು ಝರಿಯ ನಡುವೆ ಅಮರಿಕೊಂಡ ಪ್ರೀತಿಯ ಬುಗ್ಗೆ! ನನ್ನ ಮನಸ್ಸು ಸುಮ್ಮನೆ ಗುನುಗಿಕೊಂಡ ಸುಚೆತನ ಗಾನ ಲಹರಿ. ಒಂದು ಧೀರ್ಘ ಕನಸಿನೊಳಗೆ ಕಳೆದುಹೋಗಿದ್ದೇನೆ.ಒಂದು ಅನವರತ ಸವಿ ನಿದ್ರೆಯೊಳಗೆ ಮತ್ತೆ ಹೋಗುವ ಬಯಕೆ...!

ಇಂಥಹ ನಿರ್ಜೀವ ಪತ್ರಗಳಿಗೂ ಭಾವ ತುಂಬಿದವಳು ನೀನು.ನನ್ನ ಭಾವದ ರೂಪು-ರೇಷೆ ,ನೀನು ಕಣೋ ಗೆಳತಿ. ನಾನಿಲ್ಲಿ ರೆಕ್ಕೆ-ಪುಕ್ಕ ಕಟ್ಟಿಕೊಂಡು ಆ ಮೋಡದ ತುದಿಗೆ ಹೋಗಿ ಮೆಲ್ಲನೆ ನಿನ್ನ ನಗಿಸುವ ಆಸೆ.ಮೋಡದೊಳಗಿನ ಮಿಂಚಂತೆ,ನಿನ್ನ ಕಣ್ಣ ಅಂಚಂತೆ!

-ನಿನ್ನವನು!

Friday, November 28, 2008

ಅಭಿಸಾರಿಕೆಗೆ.....

ಪ್ರೀತಿಯ ಅಭಿಸಾರಿಕೆ,

ತುಂತುರು ಇಲ್ಲಿ ನೀರ ಹಾಡು..
.......ಇಲ್ಲಿ ಪ್ರೀತಿ ಹಾಡು..

ಇಲ್ಲಿ ಸಣ್ಣ ತುಂತುರು ಮಳೆ.ಮನೆಯ ಮಹಡಿಯ sit out ನಲ್ಲಿ ಕುಳಿತು ಮಳೆಯ ಆನಂದ ಅನುಭವಿಸುತ್ತಿದ್ದೇನೆ. ಭುವಿಯಿದೆದ್ದ ಮಣ್ಣ ಘಮದಲ್ಲೂ ನಿನ್ನದೇ ಘಮದ ಆಸ್ವಾದ! ನಾನು ಯಾವ ಅನ್ವೇಷಕ? ತುಂತುರಿನ ನಡುವೆ ಸುಯ್ಯನೆ ಬೀಸುವ ಗಾಳಿಗೆ, 'ನೀನೂ ನನ್ನ ಜೊತೆಗಿದ್ದರೆ?' ಎಂಬ ಭಾವ! ಸಣ್ಣ ಹನಿಗಳ ನೋಡುತ್ತಾ ಕುಳಿತವನ ಭಾವದಲ್ಲೂ ನಿನ್ನದೇ ಅವಿನ್ನಾಣ. ದೂರದ ಊರಿನಲ್ಲಿ ಕುಳಿತ ನನಗೆ, ನಿನ್ನ ನೆನಪು ಅವಿಚ್ಚಿನ್ನ. ಗೆಳತಿ, ನಾನಿಲ್ಲಿ ತೀರ ಒಬ್ಬಂಟಿ. I'm alone! ನನ್ನ ಮನೆಗೆ ಆನಿಸಿಕೊಂದಂತೆ ಇದ್ದಿದ್ದೇ ನಿನ್ನ ಮನೆ.

ನನ್ನ ಮನೆಯ ಕಿಟಕಿಯಲಿ ನಕ್ಕವಳು,
ನನ್ನ ಮನಸ್ಸು ಹೊಕ್ಕವಳು...!

ನೀನೆ ಕಣೆ ಗೆಳತಿ. ನನ್ನ ಪಾಲಿನ ದೇವಕನ್ಯೆ! ಹುಡುಗಿಯರೆಂದರೆ ನನಗೆಂತಹುದೋ ಬೆರಗು! ನನ್ನಂಥ timid ಜೀವಿಯ ಮೇಲೆ ನಿನಗೆಂಥಹ ಒಲವು?!ಇಲ್ಲಿ ನಿನ್ನ ಕಾಣದೆ, I'm damned! ಒಂದು ಮನ್ವಂತರದೊಳಗೆ ಕಳೆದು ಹೋಗುವ ಆಸೆ!

I have a very apparent memory. ನಮ್ಮಿಬ್ಬರ ಪರಿಚಯವಾಗಿ ಐದು ವರ್ಷಗಳಾಗಿರಬಹುದು. 'ನಮ್ಮ ಪಕ್ಕದ ಮನೆಗೆ ಯಾರೋ ಬರ್ತಾರಂತೆ', ಅಂತ ಅಮ್ಮ ಹೇಳುತ್ತಿದ್ದರು. ನನಗೆ, ಯಾರಿರಬಹುದೆಂಬ ಕೌತುಕ. ಮನೆಯ ಗೇಟಿನ ಮುಂದೆ ಕಣ್ಣರಳಿಸಿ ನಿಂತವನ ಮುಖದಲ್ಲಿ ಯಾವುದೂ ಆಸೆಯ ಜೀವ! ನೀನು, ಕಾರಿನಿಂದ ಕೆಳಗಿಳಿದಾಗ ನನಗೆ ಕಂಡಿದ್ದು, ನಿನ್ನ ನಗುವಿನ ಅನಾವರಣ! ಅಂದು,ತೀರ casual ಆಗಿ ನೋಡಿದ ನಿನ್ನ ನೋಟದಲ್ಲಿ ಏನಿತ್ತು, ಏನಿಲ್ಲ, ನನಗೆ ಗೊತ್ತಿಲ್ಲ!

ಅಂದೆಲ್ಲಾ,ನವರಾತ್ರಿಯ ಬೊಂಬೆ ಭಾಗಿನಕ್ಕೆ ನೀನು ಬರುತ್ತಿದ್ದಾಗ ನಿನ್ನಲ್ಲಿ ಎಂಥಹ ಸೌಮ್ಯ ಚೆಲುವು? ನಾನು ನಿನ್ನ ಚೆಲುವಿಗೆ ದಿಗ್ಮೂಢ!

ನಿನ್ನ ಚೆಲುವ ವದನ,
ಕಮಲ ನಯನ....

ಮನೆಯಲ್ಲಿ ಅಮ್ಮ ತಿಂಡಿಯೆನಾದರು ಮಾಡಿದಾಗ, ' ಪಕ್ಕದ ಮನೆ ಆಂಟಿಗೆ ಕೊಟ್ಟು ಬಾ....' ಎಂದಾಗಲೆಲ್ಲ ಬರುತ್ತಿದ್ದಿದ್ದೆ ನಿನ್ನ ನೋಡಲಿಕ್ಕೆ!! ಮನೆಯ ಹಿಂದಿನ ಇಷ್ಟಗಲದ ಜಗುಲಿಯ ಮೇಲೆ ಕುಳಿತು ಮಾತಾಡುತ್ತಿದ್ದರೆ....ನಮ್ಮಿಬ್ಬರ ಜಗತ್ತು ತುಂಬಾ ಚಿಕ್ಕದು! And... We had a ambiguous talk! ನಿನ್ನ ಅವ್ಯಾಜ innocence, ಜಗತ್ತಿನ ಆಸೆಯನ್ನೆಲ್ಲ ತುಂಬಿಕೊಂಡಿರುವಂತೆ ನಿನ್ನ ಕಣ್ಣು, ಮೃದುವಾದ ಹೆರಳು, ಆ ಪುಟ್ಟ ಕೆನ್ನೆಯ ನಡುವೆ ಗುಳಿ ಬಿದ್ದರೆ ಅರಳುವ ತುಟಿ,ಮತ್ತು ಅನಿರ್ವಚನೀಯ ಪ್ರೀತಿ-ಇಷ್ಟು ಸಾಕು!
I was defeated!

ಹೃದಯದಲಿ ಇದೇನಿದು?
ನದಿಯೊಂದು ಓಡಿದೆ!!

ಗೆಳತಿ, ನಿನ್ನೊಡನೆ ಮಾತನಾಡುತ್ತಾ ಕುಳಿತರೆ,ನನ್ನ comfort zone ಏ ಬೇರೆ. ಇಂಥಹ ಭಾವಕ್ಕೆ ಪ್ರೀತಿಯೆಂದರೆ ಪ್ರೀತಿ, ಸ್ನೇಹವೆಂದರೆ ಸ್ನೇಹ! I'm very much obscured! ನೀನೆಂದರೆ ನನಗೆ ಬಹಳ ಇಷ್ಟ ಎಂಬುದಕ್ಕೆ ನನ್ನಲ್ಲಿ ನೂರು ಮಾತು; ಮನದ ಭಾವಕ್ಕೆ ಭಾಷೆ ಎಂಥಹ ಸಾಧನ?!
ನಾಲ್ಕು ಪದದಾ ಗೀತೆಯಲಿ,
ಹೃದಯವನು ತೆರೆಡಿದಬಹುದೇ?!

ಮತ್ತೊಮ್ಮೆ ಮಗುವಾಗಿ, ಮೆಲ್ಲಗೆ ತೊದಲುತ್ತಾ,"ನಿನ್ನ ಕಂಡ್ರೆ..ಎಷ್ಟು..ಇಷ್ಟ ಪಡ್ತೀನಿ..ಗೊತ್ತ...?!" ಅಂತ ನನಗೆ ನಾನೇ ಬೆರಗಾಗುವ ಆಸೆ! ಮತ್ತೊಮ್ಮೆ ನಿನ್ನ ನೆನಪುಗಳಲ್ಲಿ ಕಳೆದುಹೋಗುವ ಆಸೆ!!

-ನಿನ್ನವನು.

Thursday, November 6, 2008

ಜೀವದ ಗೆಳೆಯ....

ಪ್ರೀತಿಯ ಸಾವಂತ್,

ನನ್ನ ಕಣ್ಣುಗಳಲ್ಲಿಂದು ಬೆಳಕಿನ ಹಬ್ಬ. ಅಥವಾ ಅಂಥಹ ನಾವೀನ್ಯತೆಗೆ ಏನೆನ್ನಬೇಕು ತಿಳಿಯಲಿಲ್ಲ. ಹಬ್ಬವೂ ಸಹ ಒಂದು ಹೊಸತನದ ಆಗಮನ,ಒಂದು ಸಂಭ್ರಮ. ಮನಸ್ಸು ಪುಟಿದೇಳುವ ಅಂತರ ಗಂಗೆ! ಇಂಥಹ ಎಲ್ಲ ಬದಲಾವಣೆಗಳು ಎಲ್ಲಾ ಹುದುಗಿಯರಂತೆ ನನ್ನಲ್ಲೂ ಸಾಮಾನ್ಯ. ಇದಕ್ಕೆ biology ಯಲ್ಲಿ ಬೇರೆಯದೇ ಹೆಸರಿದೆ! I do not bother! ನನ್ನಲ್ಲಿನ ಈ ಆಸೆಗೆ, ಕಣ್ಣಲ್ಲಿನ ಬೆಳಕಿಗೆ ಹೊಳಪು ತಂದವನು ನೀನು.

Indeed,ನನಗೆ ಪತ್ರ ಎಂದರೆ ತೀರ uncommon.ಇಂದಿನ ಕಾಲದ ಹುಡುಗಿ ನಾನು. chat ಮಾಡುತ್ತಾ, SMS ಬರೆಯುತ್ತಾ ಕುಳಿತಿರುತ್ತೇನೆ. ಇಂದು ತುಂಬ orthodox ಆಗಿ ಪತ್ರ ಬರೆಯುತ್ತಿದ್ದೇನೆ.ಇಲ್ಲಿ ನನ್ನ ಮನಸ್ಸಿನ ಭಾವನೆಗಳೆ ದೊಡ್ಡ paradox. ಇವುಗಳಿಗೆಲ್ಲ ನನ್ನ ಬಳಿ ವಿವರಣೆಗಳಿಲ್ಲ. I have no explanations left! Biology ಇದಕ್ಕೆ hormone ನ ಕಾರಣ ಕೊಡುತ್ತದೆ! I do not care! ಸುಮ್ಮನೆ ನಿನ್ನ ಕನಸುಗಳಲ್ಲಿ ಕಳೆದುಹೋಗಿದ್ದೇನೆ.

ನಮ್ಮ ತರಗತಿಗಳ ಮೊದಲ ದಿನವೇ ಕಣ್ಸೆಳೆದವನು ನೀನು. ಮೊದಲ ಸಾಲಿನಲ್ಲಿ ಕುಳಿತು ನೀನು ಪಾಠ ಕೇಳುತ್ತಿದ್ದರೆ ಪಾಠದಲ್ಲಿ ನೀನು ಮಗ್ನ. ನಮ್ಮ ತರಗತಿಯಲ್ಲಿ, tall ಆಗಿ, ಬೆಳ್ಳಗಿದ್ದ ಹುಡುಗ-ನಿನಗೆ ನನ್ನದೇ ದೃಷ್ಟಿಯಾದೀತು! ಸುಮ್ಮನೆ ನೀನು ನಮ್ಮ ಹುಡುಗಿಯರ ಗುಂಪಿನ ಕಡೆ ನೋಡಿದಾಗ, ನೀನು ನನ್ನನ್ನೇ ಹುಡುಕುತ್ತೀಯ? ನನ್ನ ಎದೆಯಲ್ಲಿ ಒಂದು inexplicable ತಳಮಳ. Psychology ಇದಕ್ಕೆ infatuation ಅನ್ನುತ್ತದೆ. But, I do not mind! ಇಂದಿಗೆ ನಮ್ಮ ಗೆಳೆತನಕ್ಕೆ 2 ವರ್ಷ!

ಇಂಥಹ ಆಸೆಗಳಿಗೆ ಬಣ್ಣ, ನನ್ನ human instinct ಗಳಿಗೆ ಜೀವ ಹಾಗು ಕನಸುಗಳಿಗೆ ರೆಕ್ಕೆ ಕೊಟ್ಟವನು, ನೀನು ಕಣೋ ಗೆಳೆಯ. ಆ ಪತ್ರ ನಿನ್ನ ಕೈಗೆ ಕೊಡಬೇಕೆಂದು ನನ್ನ ಬಯಕೆ. ಆದರೆ ಪಾಪ ಹುಡುಗಿ, ನನಗೆಲ್ಲಿ ಅಷ್ಟು ಧೈರ್ಯ ಬರಬೇಕು?! ನೀನು ಕುಳಿತುಕೊಳ್ಳುವ ಬೆಂಚಿನ ತುದಿಗೆ ಇಟ್ಟಿರುತ್ತೇನೆ, ನಿನಗೆ ಮಾತ್ರ ಎಟಕುವ ಹಾಗೆ!


-ನಿನ್ನ ಪ್ರೀತಿಯ ಗೆಳತಿ.

Wednesday, October 29, 2008

ಪ್ರೀತಿಯ ದೀಪ್ತಿ.....

ಪ್ರೀತಿಯ ದೀಪ್ತಿ,

ಕಾರ್ತಿಕ ಮತ್ತೊಮ್ಮೆ ದೀಪ ಬೆಳಗಿ ನಿಂತಿದೆ.ನನ್ನಯ ದೀಪಾವಳಿಗೆ ನಿನ್ನ presence ಗೆ, ನನ್ನ ಮನಸ್ಸೆಲ್ಲ ದೇದೀಪ್ಯಮಾನ. ಹಬ್ಬಗಳು ನಮ್ಮ ಪಾಲಿಗೆ ಕೇವಲ ಹಬ್ಬಗಳಲ್ಲ.They are not mere festivals. They are something beyond it. ಕಳೆದ ದೀಪಾವಳಿಗೆ ನೀನು present ಮಾಡಿದ್ದ ತಿಳಿ ನೀಲಿ shirt,jeans pant ನಲ್ಲಿ ನಾನು ಎಷ್ಟು ಚೆನ್ನಾಗಿ ಕಾಣುತ್ತೀನಿ ಗೊತ್ತ! ಈ ಸಲ, ನಾನು-ನಿನಗೆ, ಒಂದು ಪಿಂಕ್ ಬಣ್ಣದ ಚೂಡಿದಾರ ತೆಗೆದಿಟ್ಟಿದ್ದೇನೆ. ನಿನ್ನ ಆ ತಿಳಿ ಕೆಂಪು ಕೆನ್ನೆಯ ನಡುವೆ, ನೀನು ಎಷ್ಟು ಮುದ್ದಾಗಿ ಕಾಣುತ್ತೀಯ ಎಂದು ಯೋಚಿಸುತ್ತಾ ಕುಳಿತ್ತಿದ್ದೇನೆ!!


ये रात है हसीं..
दर्द भी...है जवान..


ಇವತ್ತಿನ ರಾತ್ರಿ ನಿದ್ರಾಹೀನ!ಬಿಮ್ಮನೆ ಎದ್ದು ಕುಳಿತು ಪತ್ರ ಬರಿಯುತ್ತಿದ್ದೇನೆ. ನಾಳಿನ ಬೆಳಗು ಕಣ್ತೆರೆದರೆ, " ದೀಪಾವಳಿ".ಇಲ್ಲಿ ಸಣ್ಣಗೆ ಹಿಮ ಬೀಳುತ್ತಿದೆ.ನೀನೂ,ನನ್ನ ಕಿವಿಯಲ್ಲಿ ಮೆಲ್ಲಗೆ ಉಸಿರಿದ ಹಾಗೆ ಹಿಮದ ಸದ್ದು. ಹಬ್ಬದ ಬೆಳಿಗ್ಗೆ ಎಂದಿನಂತೆ ಅಭ್ಯಂಜನ ಮುಗಿಸಿ ಮನೆಗೆ ಬರುತ್ತೇನೆ.ಪ್ರತಿ ಹಬ್ಬದ ನಮ್ಮ ಮೊದಲ ಕಾಯಕ "ದೇವಸ್ಥಾನ". ನಿನ್ನ kinetic ನಲ್ಲಿ ಸೂರ್ಯ ರಶ್ಮಿ ಕಣ್ತೆರೆಯುವ ಮುನ್ನ ಹೊರಟು ಬಿಡೋಣ. ನಿನಗೆ ಎಷ್ಟು ಅವಿಚ್ಚಿನ್ನ ಭಕ್ತಿ! ನಾನಾದರೂ ದೇವರಾಗಿರುತ್ತಿದ್ದರೆ ನಿನ್ನ ಎದರು ನಿಂತು "ತಥಾಸ್ತು" ಎಂದು ಬಿಡುತ್ತಿದ್ದೆ!! ನಿನ್ನ ಆ ಪುಟ್ಟ ಬಿಂದಿಯ ಕೆಳಗೆ ಇಟ್ಟ ದೇವರ ಕುಂಕುಮದಲ್ಲಿ ಎಷ್ಟು ಲಕ್ಷಣವಾಗಿ ಕಾಣುತ್ತೀಯ ಗೊತ್ತ?!ನಾನಿಲ್ಲಿ ನಿನ್ನನ್ನೇ ಧೇನಿಸುತ್ತಿದ್ದೇನೆ!

ಸಂಜೆಯಾಯಿತೆಂದರೆ ಜಗುಲಿಯ ಮೇಲಿಡುವ ಹಣತೆಯಲ್ಲಿ ಏನು ಓರಣ? Perhaps,ನನಗೆ ಆ ನಿನ್ನ ಓರಣ ಇಷ್ಟವಾಗುತ್ತದೆ.ನೀನೂ ಉಡುವ ಬಟ್ಟೆಯಿಂದ ಹಿಡಿದು,ನೀನು ಮಾಡುವ ಪ್ರತಿ ಕೆಲಸದ ಮಟ್ಟಸ ಇಷ್ಟವಾಗುತ್ತದೆ.ನಾಳೆಯ ಹಬ್ಬದ ರಾತ್ರಿಗೆ ಒಂದಷ್ಟು,ಹೂ-ಕುಂಡ,ಹೂ-ಬಾಣ ಹಾಗು ನಿನ್ನ ಹೂ-ನಗೆ!!ಸಾಲಾಗಿ ಜೋಡಿಸಿದ ನಿನ್ನ ದಂಥಪಂಕ್ಥಿಯಲ್ಲೂ ಆ ಸಾಲು ಹಣತೆಯ ಬೆಳಗು!

ಕಳೆದೆಲ್ಲ ದೀಪಾವಳಿಗೆ ನಮ್ಮಿಬ್ಬರ ನಡುವೆ ಏನೆಲ್ಲ ಇರುತ್ತಿದ್ದವು, ಯೇನುರುತ್ತಿರಲಿಲ್ಲ? ನಮ್ಮಿಬ್ಬರ ಬಾಲ್ಯ,ಆಟ,ನಮ್ಮ ಗೆಳೆತನ ಹಾಗು ನಿನ್ನ ಸುಂದರ ಮುನಿಸು! ಇಷ್ಟರಲ್ಲೇ ನಾವಿಬ್ಬರೂ ಇಷ್ಟು ಎತ್ತರಕ್ಕೆ ಬೆಳೆದ ಮಕ್ಕಳು!ಕಳೆದ ವರ್ಷದ ದೀಪಾವಳಿಯಲ್ಲಿ, ಹಣತೆಗಳ ನಡುವೆ ಕುಳಿತುಕೊಂಡು ನಾವಿಬ್ಬರು ತೆಗೆಸಿಕೊಂಡ photo ನೋಡುತ್ತಾ ಕುಳಿತಿದ್ದೇನೆ.ನನ್ನ ಮನಸಿನಲ್ಲಿ, ನಿನ್ನದೇ ಸೌಂದರ್ಯ ಲಹರಿ! ಇಪ್ಪತ್ತಮೂರು ದೀಪಾವಳಿಗಳನ್ನು ಒಟ್ಟಿಗೆ ಕಳೆದಿದ್ದೇವೆ. ಇಪ್ಪತ್ತ್ನಲ್ಕನೆ ದೀಪಾವಳಿಯ ಬೆಳಗನ್ನು ಎದರು ನೋಡುತ್ತಿದ್ದೇನೆ. ಈ ರಾತ್ರಿಯ ನೀರವ ಮೌನದಲ್ಲಿ ನಿನ್ನ ಬಳಿ ಮಾತನಾಡುವುದು ಬಹಳಷ್ಟಿದೆ,ನಿದ್ರೆ ಬರದಿದ್ದರೆ ಬಂದು ಬಿಡು ಗೆಳತಿ...

-ನಿನ್ನವನು.

Monday, October 13, 2008

ಪಕ್ಕದ ಮನೆ ಗೆಳತಿಗೆ....

ಪಕ್ಕದ ಮನೆ ಗೆಳತಿ,

ಇಲ್ಲಿ ನಗರವೆಂಬ ನಗರ ಮೆಲ್ಲಗೆ ಮೈ ಮುರಿದು ಏಳುತ್ತಿದೆ. ಬೆಚ್ಚನೆ ಮಲಗಿದ್ದ ರಸ್ತೆಯಲ್ಲೂ ಒಂದು ಹಿತ ಆಲಸ್ಯ.ಹಾಸಿಗೆಯಿಂದ ಮೇಲೆದ್ದವನ ಕಣ್ಣ ಮುಂದೆ ನಿನ್ನದೇ ಚಿತ್ರಣ.ರಾತ್ರಿಯಷ್ಟೇ ನಾವಿಬ್ಬರೂ ಜಗುಲಿಯಲ್ಲಿ ಕುಳಿತು ಮಾತನಾಡಿದ ಉಸಿರಿನ ಉಸಿರು ನನ್ನ ಕಿವಿಯಲ್ಲಿ ಹಾಗೆಯೇ ಇದೆ.ಮನೆಯ ಹಿಂದಿನ ಪಾರಿಜಾತ ಗಿಡದ ಹೂವಿನ ಘಮ.ನೀನು ಶುಬ್ಬ್ರ ಮುಂಜಾವಿನಲ್ಲಿ ಬಂದು ಪೂಜೆಗೆಂದು ಆಯ್ದು ಹೋದ ಹೂವು-ಇಲ್ಲಿ ನಿನ್ನ ಹೆಜ್ಜೆ ಗುರುತು, ನನ್ನ ಇಷ್ಟಗಲದ ಹಣೆಯ ಮೇಲೆ ಇಟ್ಟು ಹೋದ ಸಕ್ಕರೆ ಬಿಳುಪಿನ ಸಿಹಿ ಮುತ್ತು !!

ನನ್ನ ದಿನ ಪ್ರಾರಂಭವಾಗುವುದೇ ಹೀಗೆ.ನಾನಿಲ್ಲಿ ಏಳುವ ಹೊತ್ತಿಗಾಗಲೇ,ನೀನು ಬೃಂದಾವನದ ತುಳಸಿಗೆ ಪೂಜೆ ಮಾಡುತ್ತಾ ನಿಂತಿರುತ್ತೀಯ.ನಿನ್ನ ಕೈಲಿರುವ ಉದಿನ ಕಡ್ಡಿಗೂ ನಿನ್ನ ತಿಳಿ ಸೌಂದರ್ಯದ ಘಮ! ನಿದ್ದೆ ಕಣ್ಣಲ್ಲೇ ಬಂದು ನಿಂತವನನ್ನು ನೋಡಿ ಸುಮ್ಮನೆ ನಿನ್ನ ಕಣ್ಣಲ್ಲಿ ಒಂದು ಹುಸಿ ನಗು.
ನನ್ನ ಗಂಟಲಲ್ಲಿ ಮಾತೇ ಹೊರಡುವುದಿಲ್ಲ.ನಿನ್ನ ಆ ಜರಿ ಲಂಗ,ಹಣೆಯಲ್ಲಿನ ಆ ಕುಂಕುಮ,ಹಾಲಿನಲ್ಲಿ ಅದ್ದಿದಂತ ಆ ಮುದ್ದು ಗಲ್ಲ,ಆ ಪುಟ್ಟ ತುಟಿಗಳು ನಿನಗೆ ಎಷ್ಟು ಒಪ್ಪುತ್ತದೆ ಗೊತ್ತ?
ಅಡಿಗೆ ಮನೆಯಿಂದ ಅಮ್ಮ, "ಆಫೀಸಿಗೆ ಹೊತ್ತಾಯಿತು ಸ್ನಾನಕ್ಕೆ ಹೊರಡು...." ಅನ್ನುವ ವರೆಗೂ ನನ್ನ ಕಣ್ಣಲ್ಲಿ ಇರುವವವಳು ನೀನೆ!

ನಾನು ಮತ್ತೆ ಮನೆಗೆ ಬರುವ ಹೊತ್ತಿಗಾಗಲೇ ನೀನು ನಿನ್ನ ಕಾಲೇಜಿನ ಪುಸ್ತಕಗಳಲ್ಲಿ ಕಳೆದುಹೊಗಿರುತ್ತೀಯ.ಮತ್ತೆ ನನ್ನ ಮನಸ್ಸು,ನೀನು ಯಾವಾಗ ಒಂದು ನಗೆ ಬೀರುತ್ತೀಯೋ ಎಂದು ತುಡಿಯುತ್ತಿರುತ್ತದೆ.ನಿನ್ನ ಒಂದು ಕಾಲ್ಗೆಜ್ಜೆಯ ಗೆಜ್ಜೆ ನನ್ನ ಬಳಿ ಇದೆ.ಆ ಗೆಜ್ಜೆಯಲ್ಲೂ ನಿನ್ನ ಹೆಜ್ಜೆಯದೇ ಸಪ್ಪಳ.
ಒಂದೇ ರಸ್ತೆಯ ಎರಡು ಪುಟ್ಟ ಪುಟ್ಟ ಮಕ್ಕಳು ಬೆಳೆದು ದೊಡ್ಡವರಾದ ಕಥೆ-ನಮ್ಮಿಬ್ಬರ ಹೆಸರು!

ಆಗೆಲ್ಲ ನಿನ್ನ ಕರೆಗೆ ಒಗೊಡುತ್ತಿದ್ದವನು, ನಿನ್ನ ಆಟಕ್ಕೆ ಜೊತೆಯಾದವನು , ನಿನ್ನ ಬೇಸರಕ್ಕೆ ಕಿವಿಯಾದವನು, ಮನೆಯ ಹಿತ್ತಲಲ್ಲಿ ಮೂಡಿದ ನಿನ್ನ ಹೆಜ್ಜೆ ಗುರುತಿಗೆ ಬೆರಗಾಗುವವನು, ನಿನ್ನ ಆ ಒಂದು ಸಣ್ಣ ಖುಷಿಗಾಗಿ ದಿನವೆಲ್ಲ ಹಪ ಹಪಿಸುವವನು, ನಿಷ್ಕಾರಣವಾಗಿ ನಿನ್ನ ಪ್ರೀತಿಸುವವನು, ನಾನಲ್ಲದೇ ಇನ್ನ್ಯಾರೆ ಗೆಳತಿ?!

-ನಿನ್ನವನು.

Tuesday, October 7, 2008

ಪ್ರೀತಿ-ನೆನಪು.


ನಿನ್ನ ನೆನಪಿಗೆ ವಿರಹದ ಹೆಸರು,
ನನ್ನ ಕನಸಿಗೂ ನಿನ್ನದೇ ಹೆಸರು!
ವಿರಹದ ನೆನಪೇನು ಧಗಿಸುವ ಬೆಂಕಿಯೇ?
ವಿರಹದ ಬೆಂಕಿಯೂ ಉಪಶಮನ,
ನೀನು-ಬೆಳದಿಂಗಳ ಬಾಲೆಯೇ?

ಕೆನ್ನೆಯ ಎಸಳು ದಾಸವಾಳ,
ತುಟಿಯಲ್ಲೇಕೆ ಗುಲಾಬಿ ಪರಿಮಳ!
ಕೆಸರಲ್ಲರಳುವ ಕಮಲಕ್ಕೂ,
ನಿನ್ನ ಕನ್ನಲ್ಲರಳುವ ತವಕ,
ನೀನು ಶಿಲಾ ಬಾಲೆಯೇ?


ಇಲ್ಲೆಲ್ಲ ನಿನ್ನ ನೆನಪಿನ ಹಾಡು,
ಹಾಡು-ಹಸೆಯ ಜಾಡು,
ಚೆಲ್ಲಿ ಬಿಟ್ಟಿರುವೆ ಗೆಳತಿ,
ನಿನ್ನ ಪ್ರೀತಿ,
ಶರಧಿ ಆಳಕ್ಕೆ ಬೇಡ,
ನಭದೆತ್ತರಕ್ಕೆ ಪ್ರೀತಿಸುವೆ,
ಬಂದು ಬಿಡು ಒಮ್ಮೆ.....

- ನಿನ್ನವನು.

Friday, September 26, 2008

ಮುನ್ನುಡಿ-ಹಿನ್ನುಡಿಯ ನಡುವೆ...

ಗೆಳತಿ,
ಬೆಳಗಿನಿಂದ ನಿನ್ನದೇ ನೆನಪು. ಇಲ್ಲೆಲ್ಲಾ ಮಳೆಯಾಗಿದೆ.ತಕ್ಷಣ ನೆನಪಾಗಿದ್ಧು ನೀನೆ. ಈ ಹಬ್ಬದ ಅಬ್ಯಂಜನ ಸ್ನಾನ ಮುಗಿಸಿ ಹೊರ ಬಂದವನ ಮೈಯಿಂದ ಎದ್ದ ಹಸೀ ಸೀಗೆಯಾ ಘಮ. ಕೊಡವಿದ ತಲೆ ಕೂದಲಿಂದ ಸಿಡಿಯುವ ಮಂಜಿನ ಹನಿ! ಈ ಸಲದ ಮಳೆಗೆ ಯಾವುದೋ ಚ್ಯತನ್ಯ. ಅಂಗಳದಲ್ಲಿ ಧೋ... ಬೀಳುತ್ತಿದ್ದ ಮಳೆಯ ವರ್ಷಧಾರೆ ನೋಡುತ್ತಾ ಕಿಟಕಿಯಲ್ಲಿ ನಿಂತವನಿಗೆ, ನೀನು ಹೆಗಲ ಮೇಲೆ ಹೊದ್ದ ದುಪಟ್ಟ ಆಗೊಮ್ಮೆ-ಈಗೊಮ್ಮೆ ಮುಖಕ್ಕೆ ತಾಕಿದಂತೆ ಇರಚಲು ಎರಚಿದಂತಾಯಿತು.

ನೀನು, ನನ್ನ ಮುಂಜಾವು. ನಿನ್ನ ನೆನಪಿನೊಂದಿಗೆ ಎಚ್ಚರ. ಎದ್ದು ಕುಳಿತರೆ ಅಂಗೈ ಗೆ ಆಗಮಿಸಿ, ಕಣ್ಣ ತನಕ ಸರಿಯುವ, " ಕೌಸಲ್ಯಾ ಸುಪ್ರಜಾ ರಾಮ.." ನೀನು ! ಅಮ್ಮ ತುಳಸಿಗೆ ನೀರು ಹಾಕುವುದನ್ನೇ ನೋಡುತ್ತಾ ನಿಂತವನಿಗೆ , ಆ ಕೃಷ್ಣ ತುಳಸಿಯ ಕೆನ್ನೆಗೆ ಬಿದ್ದ ತುಂತುರು ನೀನು! ಅಪ್ಪನ ಕಾಫಿಯ ಹಬೆಯಲ್ಲಿ, ಸಂಧ್ಯಾವಂದನೆಯ  ಘಳಿಗೆ ಪಂಚ ಪಾತ್ರೆಗೆ ತಗುಲಿದ ಬೆಳ್ಳಿ ಉದ್ಧರಣೆಯ ಖನ್ ಖನ್ ಉಲಿತದಲ್ಲಿ, ದೇವರ ಮುಂದಿಟ್ಟ ಹರಳು ಸಕ್ಕರೆ ಶುಬ್ಬ್ರ ಬೆಳುಪಿನಲ್ಲಿ, ಬಾಗಿಲ ನೆತ್ತಿಗೆ ಅಮ್ಮ ಚುಚ್ಚಿಟ್ಟ ಓದಿನ ಕಡ್ಡಿಯಿಂದೆಳುವ ತಿಳಿ ನೀಲ ಸೋಮಾರಿ ಹೊಗೆಯಲ್ಲಿ, calender ನ ಕೃಷ್ಣ ನ ಹಿಂದೆ ನಿಂತ ಕಾಮಧೇನುವಿಗೆನಾದರು ಜೀವ ಬಂದರೆ ಅದರ  " ಅಂಬಾ...", ಎಲ್ಲದರಲ್ಲೂ ಇರುವವಳು ನೀನೆ ಕಣೆ !!

ಹುಡುಗಿಯರೆಂದರೆ ನನಗೆ ಚಿಕ್ಕಂದಿನಿಂದಲೂ ಒಂದ್ಥರ ಬೆರಗು, ಏನೋ ಅಕ್ಕರೆ, ಸುಮ್ಮ ಸುಮ್ಮನೆ ಇಷ್ಟ. ಬಾಲ್ಯದುದ್ದಕ್ಕೋ ನನ್ನ ಜೊತೆ ಇದ್ದವಳು ನೀನೆ ಕಣೆ. ನಿನ್ನ ಜರಿ ಲಂಗ,ಬಿಗ್ಗ ಬಿಗಿ ಹೇರಲು, ದೊಡ್ಡ ಕಣ್ಣು, ಪುಟ್ಟ ಪಾದ, ನುಣುಪಾದ ಹೊಟ್ಟೆ, ಅಮಾಯಕ ಮುನಿಸು, ಮರೆತುಹೊಗುವಂತ ಸಿಟ್ಟು- ನಾನು ಭೂಮಿಗೆ ಬಂದ ಮೊದಲ ದಿನ ನೀನು ಎಲ್ಲಿದ್ದೆಯೇ  ಹುಡುಗೀ....?

ನಮ್ಮಿಬ್ಬರಿಗೂ ಬದುಕಲಿಕ್ಕೆ ಉಳಿದಿರುವುದು ಕೇವಲ ಎಂಬತ್ತು ವರ್ಷ. ಇವತ್ತಿಗೆ ಇಪ್ಪತ್ತು ನೋಡು ನೋಡುತ್ತಾ ಎಪ್ಪತ್ತಾಗಿಬಿಡುತ್ತದೆ. ಅವತ್ತಿಗೂ ನನ್ನ ಪ್ರೀತಿ ಮುಗಿಯದು. ನಿನ್ನ ಕೆನ್ನೆಯ ಸುಕ್ಕಿನಲ್ಲಿ, ಕನ್ನಡಕದ ಮಂಕಿನಲ್ಲಿ, ಹಳೆಯ ನಲ್ಕೆಳೆಯ ಸರದ ಸವೆದ ಕೊಂಡಿಯಲ್ಲಿ ನಾನಿರುತ್ತೇನೆ; ನಿನ್ನ ಕೊನೆಯ ಉಸಿರಾಟದಲ್ಲಿ !
ನೀನು ಗೋಣು ಚೆಲ್ಲಿ ಮಲಗಿದ ತಾವಿನಲ್ಲಿ ನಾನಿರುತ್ತೇನೆ, ಗೆಳತೀ...!
                     
                                                                                                                                          - ನಿನ್ನವನು.    

Thursday, September 25, 2008

ನಿನ್ನವನು.....

ಪ್ರೀತಿಯ ಮಳೆ,
ಇಲ್ಲಿ ಕೆಲಸ ಬೆಟ್ಟದಷ್ಟು ಇದೆ.ನಿನಗಾಗಿ ಬರೆಯುತ್ತಾ ಅಕ್ಷರಗಳಲ್ಲಿ ಕಳೆದು ಹೋಗಿದ್ದೇನೆ. ಹೊರಗೆ ಕತ್ತಲು ಬಿದ್ದಿರುವುದು ಅರಿವಿಗೆ ಬಂದಿಲ್ಲ.ಕಿಟಕಿ ತೆಗೆದು ದೂರಕ್ಕೆ ದಿಟ್ಟಿಸಿದರೆ, ಆಕಾಶದಲ್ಲಿ ಒಂದು ಮಿನುಗು ನಕ್ಷತ್ರ, ನಿನ್ನ ಕಣ್ಣು ಹೊಳೆದಂತೆ. I know, ನಿನಗೆ ಕನ್ನಡ ಅಂದ್ರೆ ಅಷ್ಟಕ್ಕಷ್ಟೇ. ಇದೊಂದು ಬಾರಿ ಓದಿಬಿಡು. ಮುಂದೆಂದಾದರೋಮ್ಮೆ ನಿನಗೆ ಇಂಗ್ಲಿಷ್ ನಲ್ಲಿ ಪತ್ರ ಬರೆದಾಗ ನನ್ನ ಇಂಗ್ಲಿಷ್ ascendancy ಕಂಡು ಹೊಟ್ಟೆ ಕಿಚ್ಚು ಪಡಬೇಡ ಹುಡುಗೀ...

ಇಡೀ ಜಗತ್ತಿನಲ್ಲಿ ನನಗೆ ಯಾರು ಇಲ್ಲ ಅನ್ನಿಸಿದಾಗ ನೆನಪಾಗುವವಳು ನೀನೂ.
तू ही प्यार
तू ही चाहत,
तू ही आशिकी है.

ನಿನಗೆ ಗೊತ್ತಿಲ್ಲ ಡಿಯರ್...ಕೆಲವು ಸಲ ನಾನು ಏಕಾಂತಕ್ಕಿಂತ ಒಬ್ಬಂಟಿ, ಒಬ್ಬಂಟಿಗಿಂತ lonely! And I felt so helpless ಗೊತ್ತ? ನಾನಿಲ್ಲಿ ನಿನ್ನದೇ ನೆನಪುಗಳಲ್ಲಿ ಕಳೆದುಹೋಗಿರುವೆ. ನಿನ್ನ ನೆನಪು ಭೋರ್ಗರೆಯುವ ಜಲಪಾತ! But, ನೀನೂ ಅಲ್ಲೆಲ್ಲೋ ಗೆಳತಿಯರ ಜೊತೆ ಪಾನಿಪುರಿ ತಿನ್ನುತ್ತ ಜೀವನ ಹಾಳುಮಾಡಿಕೊತಿರ್ತೀಯಲ್ಲ, is that fair to you?

ಮನೆಗೆ ಹೋದವನಿಗೆ ನಿನ್ನದೇ ನೆನಪು. ನೀನೂ enigma ಕಣೆ.ನಿಜ ಹೇಳಲಾ? ನಾನು ಆತಂಕಗೊಳ್ಳುವುದು ನಿನ್ನ ಮಾತಿಗಲ್ಲ, ನೀನ್ನ ಮೌನಕ್ಕೆ. ನಿಜಕ್ಕೂ ಭಯ ಹುಟ್ಟಿಸುವ ಮೌನ ನಿನ್ನದು. ಅದೊಂದಿಲ್ಲದೇ ಹೋಗಿದ್ದರೆ ಜೀವನದುದ್ದಕ್ಕೂ ಒಬ್ಬಂಟಿಯಾಗೆ ಬೆಳೆದ ನನ್ನನ್ನು ಯಾವುದು ಹೆದರಿಸಬೇಕು ಹೇಳು? ಕಟ್ಟಲು, ಒಬ್ಬಂಟಿತನ,ಮಾತು, ಜಗಳ, ನಿರಾಸೆ-all in the game. I am in you. ನಮ್ಮಿಬ್ಬರ ಗೆಳೆತನಕ್ಕೆ, ಗೆಳೆತನದ ಒಳಗಿನ ಸೆಳೆವಿಗೆ ನಮ್ಮಿಬ್ಬರದೆ ಹೆಜ್ಜೆ ಗುರುತುಗಳು. ಹೀಗೆ ಮೆಚ್ಚುವುದು, ಹೀಗೆ ಸುಮ್ಮನೆ ಪ್ರೀತಿಸುವುದು, ನನಗಲ್ಲದೆ ಇನ್ನ್ಯಾರಿಗೆ ಸಾಧ್ಯ?

ಮುತ್ತು ಬೇಕೆಂದರೆ ಸಮುದ್ರವನ್ನೆಲ್ಲ ಕದಲಿಸಿ ಆಳಕ್ಕಿಲಿದವನು, ಬೆಳದಿಂಗಳು ಬೇಕೆಂದಾಗಲೆಲ್ಲಾ ಕತ್ತಲಲ್ಲಿ ಬಂದು ಕಿಟಕಿ ಕಟಕತಿಸಿದವನು, ಸುಮ್ಮನಿರು ಅಂದಾಗ ಮಾತ್ರ ಸುಮ್ಮನೆ ನಿನ್ನೊಳಗಿನ ಕಂದನಂತೆ ಇದ್ದುಬಿಟ್ತವನು.

ನಾನಲ್ಲದೇ ಇನ್ನ್ಯರೆ ಹುಡುಗೀ?!

- ನಿನ್ನವನು.