Wednesday, November 4, 2009

ನನ್ನೊಳಗೆ ಬೆಳಗುವುದು ನಿನ್ನ ಸ್ನೇಹದ ತಿಳಿ ನೀಲಾಂಜನ ಮಾತ್ರ!


ಅನುರೂಪದ ಗೆಳತಿ,
ನಗರದೊಳಗೆ ಹಬ್ಬದ ದಿಬ್ಬಣವೆಲ್ಲ ಮುಗಿದು ಸಣ್ಣಗೆ ನಿದಿರೆಗೆ ಜಾರುತ್ತಿದೆ. ಮನೆಯ ಮುಂದಿನ ಹೊಸ್ತಿಲ ಬಳಿಯಿರುವ ದೀಪಕ್ಕೆ ಸಣ್ಣ ಮಂಪರು. ನನ್ನೊಳಗೆ ನೂರು ಮತಾಪಿನ ಬೆಳಕು ಹಾಗು ನೆನಪಿನ ನೆರಳು-ಬೆಳಕಿನಾಟ! ಬೀದಿಯ ತುದಿಯಲ್ಲಿ ಯಾರೋ ಹೊಡೆದ ಪಟಾಕಿಯ ಸದ್ದು ಮೆಲ್ಲನೆ ಕ್ಷೀಣಿಸುತ್ತದೆ. ನೀನು ಮಾತ್ರ ನನ್ನೊಳಗೆ ಮಾಯದ ಗಾಯದಂತೆ ಉಲ್ಬಣಗೊಳ್ಳುತ್ತೀಯ! ನನಗೆ ಗೊತ್ತಿಲ್ಲ, ನಮ್ಮಿಬ್ಬರ ಇಪ್ಪತ್ತು ವರ್ಷಗಳ ಸಾಂಗತ್ಯದಲ್ಲಿ ನೀನು ನನ್ನೂಡನಿದ್ದರೂ, ತೀರ ನನಗೆ ನಾನೇ ಏಕಾಂಗಿಯಾಗಿ ಭಾಸವಾಗಿದ್ದು perhaps ಇದೆ ಮೊದಲು. ಇನ್ನು ನನ್ನ ಏಕಾಂಗಿತನವನ್ನು ಹವ್ಯಾಸವಾಗಿ, ರೂಢಿಗಳಾಗಿ, ದಿನಚರಿಗಳಾಗಿ ಅಭ್ಯಯಿಸಿಕೊಳ್ಳಬೇಕು. ಹಬ್ಬ ಮುಗಿದ ಮೇಲೆ ನನ್ನೊಳಗೆ ಇರುಳು ಸುರಿಯುವಂತೆ...

हे अँधेरा.....
झला दे मुझे...!!

ಮನಸ್ಸು ತೀರ nostalgic ಆಗಿ, retrospective ಆಗಿ behave ಮಾಡತ್ತೆ. ನನ್ನ ಬಳಿ ಉತ್ತರಗಳಿಲ್ಲ. ನಿನ್ನೊಡನೆ ಬಾಲ್ಯದಿಂದಲೂ ಆಟವಾಡುತ್ತ ಬೆಳೆದೆ ಎಂಬ ಕಾರಣಕ್ಕೋ ಏನೋ, ನೀನು ತೀರ ನನ್ನ ಪ್ರಾಣವೇ ಎಂಬಂತಾಗಿ ಹೋದೆ. ಅದೇನು ನನ್ನ ವೀಕ್ನೆಸ್ಸುಗಳೋ ಏನೋ ನನಗೆ ಗೊತ್ತಿಲ್ಲ, ಅಥವಾ ಈ ಹುಡುಗರ ಮನಸ್ಸೇ ಹೀಗೋ?! ನಾನು ಕಣ್ಣು ತೆರೆದರೆ ಕಾಣುತ್ತಿದ್ದಿದ್ದು ನಿನ್ನ ಮನೆಯ ಕಿಟಕಿ. ಮೇರೆ ಸಾಮನೇ ವಾಲೆ ಕಿಟಕಿಯಲಿ ಇದ್ದ ಚಾಂದ್ ಕ ತುಕುಡ..ಅದು ನೀನೆ! ನಿನಗೆ ಬೆಂಡೆಕಾಯಿ ಎಂದರೆ ಅಲರ್ಜಿ. ನಿನಗೆ ನಾನಿಟ್ಟ ಹೆಸರು 'ಬೆಂಡೆ ಕಾಯ್'.
ಶಾಲೆಯ ದಾರಿಯುದ್ದಕ್ಕೂ ನಡೆಯುವಾಗ ಮೂಡುತ್ತಿದ್ದ ನಿನ್ನ ಗೆಜ್ಜೆ ಸದ್ದಿನ ದನಿ ನನ್ನ ದನಿ ಪೆಟ್ಟಿಗೆಯೊಳಗಿರಬಹುದು! ಈಗಲೂ ನಿನ್ನ ಕೂಗಿ ಕರೆದರೆ ಅದೇ ಗೆಜ್ಜೆಯ ಸದ್ದು! ನಿನ್ನ ಕಾಲ್ಗೆಜ್ಜೆಗಳೆಂದರೆ ತುಂಬಾ ಇಷ್ಟವಾಗಿ ಬಿಟ್ಟಿದ್ದವು. ನೀನೆಷ್ಟು ಪ್ರಿಯವಾಗಿರಬೇಕು ಹೇಳು!
ಎಲ್ಲ ನೆನಪುಗಳೂ ಬೆಚ್ಚಗೆ ಇಟ್ಟುಕೊಂಡಿರುವೆ...ಕರಗದಂತೆ!

ಬಾಲ್ಯದಿಂದ ನಿನ್ನೊಡನೆ ಇದ್ದುಬಿಟ್ಟೆ ಎಂಬ ಸಲುಗೆಯೋ ಏನೋ, ಊರೊಳಗಿನ ಹಿನ್ನೀರಿನ ದೇಗುಲದ ಬಳಿ ಕುಳಿತು ಮಾತನಾಡುತ್ತಿದ್ದರೆ, ಪ್ರಪಂಚದ ಜನಸಂಖ್ಯೆ ಕೇವಲ ಎರಡು, ನಾನು-ನೀನು! ನಿನಗೆ ಮಾತನಾಡಲಿಕ್ಕೆ ನೂರು ವಿಷಯಗಳಿದ್ದವು, ಆದರೆ ನನಗಿದಿದ್ದು ಎರಡೇ ಕಿವಿ! ನಿನ್ನ ತಿಳಿಗೆನ್ನೆಯನ್ನು ನೋಡುತ್ತಾ ನೋಡುತ್ತಾ ಮೋಹದಲ್ಲಿ ಬಿದ್ದು ಬಿಡುತ್ತೇನ ಅನ್ನಿಸುತ್ತಿತ್ತು. ಮನಸ್ಸು ಮಾಡುವ ಚಡಪಡಿಕೆಗಳೇ ಹೀಗೆ. ಎಲ್ಲ ಹುಚ್ಚುತನಗಳ ಸಂಕಲಿಸಿದರೆ ನಾನಾಗುತ್ತೀನ? ಅದು ಪ್ರೀತಿಯೆನ್ನುತ್ತಿರಲಿಲ್ಲ, ನೀನು ನನ್ನೊಡನೆ ಇದ್ದೆ ಇರುತ್ತೀಯ ಎಂಬ ಹುಚ್ಚು ನಂಬಿಕೆ ಇತ್ತು. ನಮ್ಮ ಸ್ನೇಹ ಕೇವಲ ಸ್ನೇಹವಾಗಿರದೆ ಮತ್ತೇನೋ ಆಗಿತ್ತು. ಆ ಬಂಧಕ್ಕೆ ನನ್ನ ಬಳಿ ಹೆಸರಿಲ್ಲ ಗೆಳತಿ. ಒಲುಮೆಯೆನ್ನು, ಸ್ನೇಹವೆನ್ನು, ಸಲುಗೆಯೆನ್ನು. ಮತ್ತೇನೋ ಅದು! ನೀನಾದರೂ ಯಾವ ಹೆಸರು ಕೊಡುತ್ತಿದ್ದೆ ಹೇಳು?!

ಮುಂದಿನ ಫಾಲ್ಗುಣ ಕಳೆದರೆ ನಿನ್ನ ಮದುವೆಯ ಸುದ್ಧಿ. ಸಂತಸ ಪಡಲಿಕ್ಕೆ ಬೇರೇನು ಕಾರಣ ಬೇಕು? ಇಷ್ಟು ವರ್ಷಗಳ ಒಡನಾಟವೋ ಏನೋ, ನೀನು ನನ್ನ ಭಾಗವೇ ಆಗಿಬಿಟ್ಟಿದ್ದೆ. ನಾವಿಬ್ಬರೂ ಒಟ್ಟಿಗೆ ಆಚರಿಸಿದ ಕೊನೆಯ ದೀಪಾವಳಿಯೋ ಏನೋ? ನೂರು ದುಃಖಗಳು ಉಮ್ಮಳಿಸಿ ಬರುತ್ತದೆ, But,the life has to move on. ನಮ್ಮ ಒಡನಾಟ , ಆ ಬಾಲ್ಯ, ನಿನ್ನ ಕಾಲ್ಗೆಜ್ಜೆ, ಮುಂಗುರುಳು, ನಿನ್ನ ಕೆನ್ನೆ, ನನ್ನ ಮೋಹ ಎಲ್ಲವೂ Black and white ಫ್ರೇಮಿನಲ್ಲಿ ಮಂದಗತಿಯಲ್ಲಿ ಚಲಿಸುವ ಹಾಗೆ ಭಾಸವಾಗುತ್ತದೆ. ಎಂದೋ ಮುಗಿಯುವ ಸುಖಕ್ಕೆ ಮನಸ್ಸು ಇಂದೇ ಕೊರಗುತ್ತದೆ. ನಾನು ನಿನ್ನ ಗೆಳೆಯ ಎಂಬ ಕಾರಣಕ್ಕೆ ಸಂತಸಪಡಬೇಕೋ ಅಥವ ಕೇವಲ ನಿನ್ನ ಗೆಳೆಯನಾಗಿ ಮಾತ್ರ ಇರಬಲ್ಲೆ ಎಂಬ ಕಾರಣಕ್ಕೆ ದುಃಖಿಸಬೇಕೋ ತಿಳಿಯುತ್ತಿಲ್ಲ! ಪ್ರತಿ ದುಖದಲ್ಲೂ ಸಂತಸವಿರುವಂತೆ, ಪ್ರತಿ ಸಂತಸದಲ್ಲೂ ದುಖವಿರುತ್ತದಂತೆ, ಹೌದ? ಗೊತ್ತಿಲ್ಲ. ನಾಳೆ ಆ ಹಿನ್ನೀರಿನ ದೇಗುಲದ ಬಳಿ ಮಾತನಾಡಲು ನೀನಿರುವುದಿಲ್ಲ, ಕಾರ್ತಿಕದ ದೀಪಾವಳಿಗೆ ಸಂಬ್ರಮಿಸಲು ನೀನಿರುವುದಿಲ್ಲ, ಆದರೆ ನನ್ನೊಳಗೆ ಬೆಳಗುವುದು ನಿನ್ನ ಸ್ನೇಹದ ತಿಳಿ ನೀಲಾಂಜನ ಮಾತ್ರ!

- ಪ್ರೀತಿಯ ಗೆಳೆಯ.

Monday, August 31, 2009

ನಿನ್ನ ನೆನಪಿನ ಕಾಮನಬಿಲ್ಲಿನ ತುದಿಗೆ...


ಪ್ರೀತಿಯ ಗೆಳೆಯ,

ಬೆಳಿಗ್ಗೆ ಕಣ್ಣು ತೆರೆಯುತ್ತಲೇ ರಾತ್ರಿಯಿಂದ ಸುರಿಯುತ್ತಿರುವ ಜಿಟಿಜಿಟಿ ಮಳೆ. ರಾತ್ರಿಯೆಲ್ಲಾ ನಿನ್ನ ಕನಸು! ಮಳೆ ಸುರಿದಂತೆ! ಮನೆಯೊಳಗೆ ಮಳೆ ತಂದ ತಂಗಾಳಿಯ ಹಾಡು, ಮನೆಯೊಳಗೆ ಜಗುಲಿಯ ಬಳಿ ಹರಡಿದ ಶ್ರೀವಲ್ಲಿ ಗಿಡದ ಹೂವಿನ ಘಮ. ನೀನಿಲ್ಲದೆ ಬೇಸರಿಕೆಯ ಆಲಸ್ಯ. I'm dazed! ಸುಮ್ಮನೆ ಕಿಟಕಿಯ ಬಳಿ ನಿಂತು ಬಿಡದಂತೆ ಬೀಳುತ್ತಿರುವ ಮಳೆಯನ್ನು ನೋಡುತ್ತಾ ನಿಲ್ಲುತ್ತೇನೆ. ನೀನು ಕಳೆದವಾರ ನಿನ್ನ ಗೆಳೆಯನ ಮನೆಯಿಂದ ತಂದಿದ್ದ ಲಿಲ್ಲಿ ಗಿಡದ ಎಲೆಗಳಿಗೆ ತಣ್ಣೀರ ಶುಭಾಸ್ನಾನ. ನೀನಿದ್ದರೆ ಇಲ್ಲಿ, ನಿನ್ನ ಬೆಚ್ಚನೆ ಭುಜಕ್ಕೆ ಆನಿಸಿಕೊಂಡು, ನಿನ್ನ ಮೆಲ್ಲನೆ ಅಪ್ಪಿ ಹಿಡಿದರೆ, ನಿನ್ನ ಮೌನದಲ್ಲಿ ಮಾತಿನ ಸೊಬಗು.

इस तनहाई में
तेरा ही बात हो,
नींदों में तेरा याद....

ಭಾನುವಾರ ಇಂತಹ ಸಣ್ಣ ಸಣ್ಣ ಸುಖಗಳಿಗೆ ಮನಸ್ಸು ಹಾತೊರೆಯುತ್ತದೆ. ನಿನ್ನ ಬೆಚ್ಚನೆ ಅಪ್ಪುಗೆ, ಕೆನ್ನೆಯ ಹೂ ಮುತ್ತು, ತುಟಿಯಲ್ಲಿ ನಿನ್ನ ಪ್ರೀತಿಯ ಗುರುತು! No compromise! ನನ್ನಂಥ ಮಾತಿನ ಬೊಂಬೆಯೊಂದಿಗೆ ಹೇಗಿದ್ದೆಯೋ ಹುಡುಗ ನೀನು? ನನ್ನ ಕಾಲ ಗೆಜ್ಜೆಯಲ್ಲಿ, ನನ್ನ ಕೈಯ ಬಳೆಗಳಲ್ಲಿ ನಿನ್ನದೊಂದು ದನಿಯಿದೆ. ನಿನ್ನ ಕಿರುನೋಟದಲ್ಲಿ ಯಾವುದೋ ವ್ಯಾಮೋಹವಿದೆ. I'm just unfathomed.ಇಂಥಹ ಛೋಟಿ ಛೋಟಿ ವಿಷಯಗಳಲ್ಲಿ ಏನೋ ಸಂತಸವಿದೆ. ನೀನಿಲ್ಲದೆ, I'm missing you! ರಾತ್ರಿ ಸುಹಾಸಿನಿ ಫೋನ್ ಮಾಡಿ ನೀನಲ್ಲಿ ಹೈದರಾಬಾದ್ ಗೆ ತಲುಪಿದ ವಿಷಯ ತಿಳಿಸಿದಳು. ನೀನಾದರು, ಒಂದು ಫೋನ್, ಒಂದು SMS ಕಳುಹಿಸಬಾರದಿತ್ತಾ? ಗಳಿಗೆಗೊಮ್ಮೆ ಮೊಬೈಲ್ ತೆಗೆದು ನೋಡುತ್ತೇನೆ ನಿನ್ನ ವಿಷಯ ಏನಾದರು ಇದೆಯಾ ಎಂದು....

कुछ पल तू भी
मेरा याद करना..
ज़रा, मेरे जैसा...!!

ಹೊರಗೆ ಮಳೆ ನಿಲ್ಲುವ ಯಾವುದೇ ಸೂಚನೆಯಿಲ್ಲ. ಬಾಗಿಲು ತೆರೆದು ಮಳೆಯ ಸಣ್ಣ ಇರಚಲಿಗೆ, ಕಾಫಿಯ ಹಬೆಗೆ ಮುಖವೊಡ್ಡಿ ನಿಂತಿದ್ದೇನೆ. ಮನೆಯ ಮುಂದೆ ಹರಿಯುತ್ತಿರುವ ಮಳೆಯ ನೀರಿನಲ್ಲಿ ಯಾರೋ ಮಾಡಿಬಿಟ್ಟ ಕಾಗದದ ದೋಣಿ. ನಾವಿಬ್ಬರೂ ಬಾಲ್ಯದಲ್ಲಿ ಮಾಡಿಟ್ಟುಕೊಳ್ಳುತ್ತಿದ್ದ ಕಾಗದದ ದೋಣಿಗಳು ನೆನಪಾಗುತ್ತದೆ. ನೀನು ಯಾವುದೋ ವಿಚಿತ್ರ ಆಕಾರದ ದೋಣಿಗಳನ್ನು ಮಾಡಿಕೊಡುತ್ತಿದ್ದೆ. ನೀನು ಆಗಾಗ ಹೇಳುತ್ತಿದ್ದ ಗುಬ್ಬಿಯ ಕಥೆಗಳು ನನಗಿನ್ನೂ ನೆನಪಿದೆ. ಅವೆಲ್ಲ ನಿನಗೆ ಅಜ್ಜಿ ಹೇಳಿದ ಕಥೆಗಳು. ನಮ್ಮ ಸ್ನೇಹಕ್ಕೆ ಯಾವ magnitude ಇತ್ತು ಹೇಳು? ನಿನ್ನೂಡನಿರುತ್ತಿದ್ದ ಸುಧಿ, ಹರ್ಷ, ಗಂಗಾಧರ ಇವರೆಲ್ಲ ನಂಗೂ ಸ್ನೇಹಿತರೆ. ಆದರೆ ನಿನ್ನೆಡೆಗಿದ್ದ ಸ್ನೇಹದ ಪರಿಯೇ ಬೇರೆ. ನಿನ್ನ ಬೆನ್ನಿಗಂಟಿದಂತಿದ್ದ ನನಗೆ, ನಿನ್ನ ತಿಳಿ ಹುಬ್ಬು, ಮಂದಹಾಸ, ನಿನ್ನ ಮೌನ ವನ್ನೂ ಮೀರಿ ನಿನ್ನ ಇಷ್ಟಪಡಲಿಕ್ಕೆ ನನ್ನ ಬಳಿ ನೂರು ಕಾರಣಗಳಿತ್ತು. And you was decent! ನನ್ನ ಅಂಗೈಯೊಳಗೆ ಅನುರಾಗದ ರೇಖೆಗಳನ್ನು ಮೂಡಿಸಿದವನು ನೀನು ಶಮಂತ್. ಮುಂದಿನ ತಿಂಗಳ ಶ್ರಾವಣಕ್ಕೆ ನಮ್ಮಿಬ್ಬರ ಮದುವೆಯಾಗಿ ಸರಿಯಾಗಿ ಒಂದು ವರ್ಷ. How soon!

ಮತ್ತೆ ನೀನು ಹಿಂದಿರುಗುವ ವಿಷಯವನ್ನು ಯಾವುದೋ ತಂಗಾಳಿ, ನೀಲಿ ಮೋಡಗಳು ಹೇಳಬೇಕಿಲ್ಲ. ಒಂದು ಫೋನು ಮಾಡಿದರೆ ಎದೆಯಲ್ಲಿ ನೂರು ಹಣತೆಗಳು! ಅಲ್ಲಿ, ನೀನಿರುವ ಊರಿನಲ್ಲಿ ಚಳಿಯೋ, ಮಳೆಯೋ? ನಾನಿಲ್ಲದೆ ನಿನಗೆ ಏನು ವ್ಯಥೆಯೋ?! Take care ಕಣೋ ಮುದ್ದು ಕೋತಿ.

ಹೊರಗೆ ಮಳೆ ನಿಂತಿರುವ ಗುರುತು. ಗೋಡೆಯ ನಿನ್ನ ಚಿತ್ರಪಟದಲ್ಲಿ ನೀನು ನಗುವ ಮೆಲುದನಿ! ನಾನಿಲ್ಲಿ, ನಿನ್ನ ನೆನಪಿನ ಕಾಮನಬಿಲ್ಲಿನ ತುದಿಗೆ ಹೊರಟಿದ್ದೇನೆ....

- ನಿನ್ನವಳು. .

Wednesday, August 19, 2009

ನಿನ್ನ ಕನಸಿನ ಕಣಿವೆಗೆ ಸೇರುವ ತವಕ ನನ್ನದು...


ನಲ್ಮೆಯ ಗೆಳತಿ,

ನಿನ್ನ ನೆನಪು ಮನಸಲ್ಲಿ ಕದ ತಟ್ಟಿ ನಿಂತಿದೆ. ಬಾಗಿಲ ಬಳಿ ನೀನು ಬಂದಂತೆ ಭಾಸ. ಹೊರಗೆ ಸುರಿದು ಹೋದ ಮಳೆಗೆ ಮೋಡದ ಹಂಗಿಲ್ಲ. ಮನೆಯ ಮುಂದಿನ ಹೊಂಗೆಯಲ್ಲಿ ಮಳೆ ಹನಿಗಳು ಅವಿತು ಕುಳಿತಂತೆ ಕುಳಿತಿದೆ. ಸುಮ್ಮನೆ ನಿನ್ನ ಮನೆಯ ಕಿಟಕಿಯತ್ತ ನೋಡುತ್ತೇನೆ, ನೀನು ಕಾಣಬಹುದೆಂದು! ಹೊರಗಿನ ಮಳೆಗೆ ಮನೆಯ ಒಳಗೆ ಹರವಿದ ನಿನ್ನ ಹಸಿರು ಬಣ್ಣದ ದುಪಟ್ಟ ಕಾಣುತ್ತದೆ ಅಷ್ಟೇ. ನನ್ನ ಗಿಜಿಗಿಡುವ ಆಫೀಸು, ಸಂತೆಯೊಳಗಿನ ಊರು, ಹೆಸರಿಲ್ಲದ ನನ್ನ ಏಕಾಂತ ಮನೆಯಲ್ಲಿ ನನಗೆ ಕಾಣುವುದು, ನೀನು ಹಾಗು ನಿನ್ನ ನೆನಪು! ನಿನಗಾದರು ನನ್ನ ಮೇಲೆ ಸಣ್ಣ ಕರುಣೆ ಇರಬೇಕಿತ್ತು. ನನ್ನನ್ನು ಇಲ್ಲಿ ಏಕಾಂಗಿಯಾಗಿ ಬಿಟ್ಟು, ನಿನ್ನ ಯಾವುದೋ ಪುರಾತನ ಗೆಳೆತಿಯ ಅಕ್ಕನ ಮದುವೆಗೆ ಯಾಕಾದರೂ ಹೋಗಬೇಕು?! ನಾನು ಮನೆಯ ತುಂಬಾ lonely lonely! And, I feel so helpless! ನೀನು ಹೋಗುವಾಗ ನೀಡಿದ ಪುಟ್ಟ ಮುತ್ತು ನನ್ನ ಒಂದು ರಾತ್ರಿ ಗೂ ಸಾಲುವುದಿಲ್ಲ! ಇನ್ನು, ಮೂರು ದಿನಗಳನ್ನು ಹೇಗೆ ತಳ್ಳಲಿ?!

याद है तेरा,
दीप जैसे जलता...
फिर भी मेरा
अकेलापन का अँधेरा
आँखों से नहीं मिटता..!!

ನನಗಿನ್ನೂ ನೆನಪಿದೆ. ನನ್ನ ಆಫೀಸಿನ ಮೊದಲ ದಿನ ನೀವೆಲ್ಲ ನೀಡಿದ್ದ welcome party ಯಲ್ಲಿ ಗುಲಾಬಿ ಹೂವಿನ bouquet ನೀಡಿದವಳು ನೀನು. ನಿನ್ನ ಸೌಮ್ಯ ನೀಲಿ ಸಲ್ವಾರ್ ನಲ್ಲಿ,you was looking fashionable and peachy! ನಿನ್ನ ಸಣ್ಣ ಮಂದಹಾಸದಲ್ಲಿ ಏನಿತ್ತು, ಏನಿರಲಿಲ್ಲ? I dare to guess! ಆದರೂ ನನಗೆ ಹುಡುಗಿಯರ ಮನಸ್ಸು ಬಹು ಬೇಗ ಅರ್ಥವಾಗಿಬಿಡುತ್ತದೆ. ಅಮ್ಮನ ಸಾಲು ಸಾಲು ಕಷ್ಟಗಳು, ಹೇಳದೆ ನುಂಗಿಬಿಡುತ್ತಿದ್ದ ನೋವು ನನಗೆ ಚೆನ್ನಾಗಿ ಗೊತ್ತಿದೆ. ನನ್ನ ಪುಟ್ಟ ತಂಟೆ ತಂಟೆ ತಂಗಿಯ ಅಕ್ಕರೆ, ಓರಗೆಯ ಗೆಳತಿಯರ ಮೌನದ ಮಾತುಗಳು ಅರ್ಥವಾಗಿಬಿಡುತ್ತಿದ್ದವು. I am a good listener. ಇದು ನನ್ನ ಮೇಲಿರುವ compliment ಉ ಹೌದು, complaint ಉ ಹೌದು!

ನನಗೆ ನಿನ್ನ ಕೆಲಸದಲ್ಲಿನ candidness ತುಂಬಾ ಇಷ್ಟವಾಗಿಬಿಟ್ಟಿತು. ನೀನು, ನಿನ್ನ cabin ಒಳಗೆ ಕೇಳಿಯೂ ಕೇಳದಂತೆ ಗುನುಗಿಕೊಳ್ಳುತ್ತಿದ್ದ ಶಾಯರಿಗಳು ಇಷ್ಟವಾಗುತ್ತಿದ್ದವು. ನಿನ್ನ ಸುಮ್ಮನೆ ನೋಡಿದರೆ ಸಾಕು, ನಿನ್ನ ಕಣ್ಣುಗಳು ಇಷ್ಟಗಲ ನಗುತ್ತಿದ್ದವು. ನೀನು ಯಾವುದೋ ಮಲ್ಲಿಗೆಯ ನೀರಿನಲ್ಲಿ ಮಿಂದೆದ್ದು ಬಂದವಳಂತೆ ನಿನ್ನ ಬಳಿ ಘಮ ಇರುತಿತ್ತು. ಇವೆಲ್ಲ ನನಗೆ ತಿಳಿದೂ ತಿಳಿಯದಂತೆ ಇಷ್ಟವಾಗಿಬಿಟ್ಟಿತ್ತು. ಬಹುಷಃ ನಿನ್ನ ಪಾದದ ಕಿರುಗೆಜ್ಜೆಯಲ್ಲಿ ಯಾವುದೋ ಮೋಹದ ಲಾಸ್ಯವಿದೆ. And you was captivating! ಒಂದು ಬಿಡುವಿನ ವೇಳೆಯಲ್ಲಿ ಸುಮ್ಮನೆ ಬರೆದ ಕವನವನ್ನು ಎಲ್ಲರಿಗೂ mail ಮಾಡಿದ್ದೆ. ಕವನಗಳೆಂದರೆ ನಿನಗೆ ಬಹ ಇಷ್ಟ ಎಂದು ತಿಳಿದಿದ್ದೆ ಅಂದು.

ನಿನ್ನ ನೆನಪಿನ ಮೆರವಣಿಗೆ
ಹೊರಟಿದೆ ಕನಸಿನ ಊರಿಗೆ,
ಬಂದುಬಿದಲೇ ಒಮ್ಮೆ ನೀನು
ಕರೆಯದೆ ಮಾಡಿದ ಕರೆಗೆ...?!
........................

ನಿನ್ನ ಮನೆಯಿರುವುದು ನಾನಿರುವ ಬೀದಿಯ ತುದಿಯಲ್ಲೇ ಎಂದು ತಿಳಿಯಲು ವಾರಗಳೇ ಕಳೆಯಿತೇನೋ? Better late than never! ನಿನಗೆ ಕಂಬಾರರ ಸಾಹಿತ್ಯ ಇಷ್ಟವಾಗಿತಿತ್ತು. ನಾನು ಆಗೊಮ್ಮೆ-ಈಗೊಮ್ಮೆ ಬರೆಯುತ್ತಿದ್ದ ಕವನಗಳನ್ನ ಜತನದಿಂದ ಓದುತ್ತಿದ್ದೆ. ನಿನ್ನ ಹುಬ್ಬಿನ ಮೇಲೆ ಚಾಚಿದಂತ ನಿನ್ನ ನೀಲ ಮುಂಗುರುಳು, ತಿಳಿ ಹಾಲಿನ ಕೆನ್ನೆ, ಸಣ್ಣ ಮೂಗುತಿ, ಎಡ ಗಲ್ಲದ ಬಳಿ ಕಾಣದಂತೆ ಇದ್ದ ಸಣ್ಣ ಮಚ್ಚೆ, ನಿನ್ನ ಮೃದು ಪಾದದೊಳಗಿನ ಸಣ್ಣ ಗೆಜ್ಜೆ, ಹೂವಿನಂಥ ಕಣ್ಣುಗಳು...ನಿನ್ನ ಇಷ್ಟ ಪಡಲಿಕ್ಕೆ ಸಾವಿರ ಕಾರಣಗಳಿದ್ದವು. ಆದರೆ ನನ್ನ ಪ್ರೀತಿಗೆ ಕಾರಣಗಳಿರಲಿಲ್ಲ. I was reasonless! ನಿನ್ನೊಡನೆ ನಿನ್ನ scooty ಯಲ್ಲಿ ಹೋಗುವಾಗ ನಿನ್ನ ಕಿವಿಯಲ್ಲಿ ಮೆಲ್ಲನೆ ನನ್ನ ಪ್ರೀತಿಯ ಹೇಳಿದ್ದೆ. ನೀನು, ನನ್ನ ಮೆಚ್ಚಲಿಕ್ಕೆ ಸಾವಿರದ ಒಂದು ಕಾರಣಗಳಿದ್ದವು. ಅದು ನನಗೆ ತಿಳಿದಿಲ್ಲ, ಅಷ್ಟೇ! ಕಳೆದ ತಿಂಗಳು ಊರಿಗೆ ಹೋದಾಗ ತಂಗಿಗೆ ನಿನ್ನ ಫೋಟೋ ತೋರಿಸಿದ್ದೆ. ನಾನು ಹೊರಡುವ ವರೆಗೂ ರೇಗಿಸಿದ್ದಳು.

ಇಂದು ಆಫೀಸಿನಿಂದ ಹಿಂದಿರುಗಿದವನಿಗೆ ಮನೆಯಲ್ಲಿ ಗಾಢ ಮೌನದ ಅರಿವು. ನೀನಿರುತ್ತಿದ್ದರೆ ಎಷ್ಟೆಲ್ಲ ಮಾತಿರುತಿತ್ತು, ಅಲ್ಲ್ವಾ? ನೀನೆಂದೋ ಕೊಟ್ಟಿದ್ದ ಗಜಲ್ ನ ಸಿಡಿ ಯನ್ನ stereo ಗೆ ಹಾಕಿ ಮೆಲ್ಲನೆ ನಿದ್ರೆಗೆ ಜಾರುತ್ತೇನೆ. ನೆನಪಿನ ನೌಕೆಯಲ್ಲಿ, ನಿನ್ನ ಕನಸಿನ ಕಣಿವೆಗೆ ಸೇರುವ ತವಕ ನನ್ನದು...

-ನಿನ್ನವನು.

Friday, June 26, 2009

ಮಂತ್ರಗಳ ಸ್ವರದ ಏರಿಳಿತದಲ್ಲಿ ನೀನೆ-ನೀನು..


ಮುದ್ದು ಹುಡುಗಿ,

ಅಮೋಘ ಇಪ್ಪತ್ತನಾಲ್ಕು ವರ್ಷಗಳಿಂದ ಘೋರ ಬ್ರಹ್ಮಚರ್ಯ ಪಾಲಿಸುತ್ತಿದ್ದ ನನಗೆ, ನಿನ್ನ ನೋಡಿದಂದಿನಿಂದ ಎದೆಯೊಳಗೆ ಯಾವುದೋ ಹಕ್ಕಿಯ ಗೂಡು, ಮೆಲ್ಲನೆ ಚಿಲಿಪಿಲಿಯ ಹಾಡು. ಇಷ್ಟು ವರ್ಷ ನನ್ನ ಕಣ್ಣಿಗೆ ಒಮ್ಮೆಯೂ ಬಾರದಂತೆ ಎಲ್ಲಿದ್ದೆ ನೀನು! ಇತ್ತೀಚಿಗೆ ಘಟಿಸಿದಂತೆ, ವಾರಗಳ ಹಿಂದೆ ನಿನ್ನನ್ನು ನೋಡಿರಬಹುದು ಅಷ್ಟೇ...! ನೀನು, ನನ್ನನ್ನು ತೀರ ಈ ಪರಿಯಾಗಿ ಕಾಡಬಹುದು ಎಂದು ನಾನೂ ಊಹಿಸಿರಲಿಲ್ಲ! ಚಂದಿರ ನಕ್ಕಂತ ನಗು, ಮೊನ್ನೆ ಗೆಳೆಯರೊಡನೆ ಜೋಗ ಜಲಪಾತಕ್ಕೆ ಹೋದಾಗ ಜಲಪಾತದಲ್ಲಿ ಕಂಡಿದ್ದು ಬಹುಷಃ ನಿನ್ನದೇ ಕಣ್ಣಿನ ಆಳ, ತುಟಿಯಲ್ಲಿನ ಇಬ್ಬನಿ, ಮುಖವರಳಿಸಿ ನಕ್ಕರೆ ಮೆಲ್ಲನೆ ತಲೆದೂಗುವಂತೆ ನಿನ್ನ ಕಿವಿಯೋಲೆಗಳು, ರಾಘವೇಂದ್ರ ಸ್ವಾಮಿ ಮಠದ ಮುಂದೆ ಕೈ ಜೋಡಿಸಿ, ಬಿಗಿಯಾಗಿ ಕಣ್ಣು ಮುಚ್ಚಿ ಪ್ರಾರ್ಥಿಸುತ್ತ ನಿಂತಿದ್ದರೆ, ನಿನ್ನದು ಯಾವ ನಾಟ್ಯದ ಭಂಗಿ?! ನಾನಾಗಬಾರದಿತ್ತೆ ರಾಘವೇಂದ್ರ ಸ್ವಾಮಿ!! ನಿನ್ನ ಸ್ಕೂಟಿಯಲ್ಲಿ ಹಕ್ಕಿಯಂತೆ ಹೊರಟರೆ, ಮಠ ಬೀದಿಯ ತುದಿ ಕಾಣುವವರೆಗೂ ನಿನ್ನನ್ನೇ ದಿಟ್ಟಿಸುತ್ತೇನೆ , And you look damn cute! ' ಹುಡುಗಿ, ಎಷ್ಟು ಚೂಟಿಯಾಗಿದ್ದಾಳೆ ಅಲ್ಲವಾ...?' ಎಂದರೆ ಗೆಳೆಯರೆಲ್ಲ ' ಲೋ ವಿಶ್ವಾ...' ಎಂದು ನನ್ನನ್ನೇ ದಿಟ್ಟಿಸುತ್ತಾರೆ. ಇವರಿಗೆ ಯಾವ ಸುಳಿವು ಸಿಕ್ಕಿತೋ?!

ಇಲ್ಲಿ, ಮಠ ಬೀದಿಯ ತುದಿಯಲ್ಲಿ ನಾಟ್ಯ ಶಾಲೆಯಿದೆ ಎಂದು ತಿಳಿದಿದ್ದೇ ನೀನಲ್ಲಿ ಭರತನಾಟ್ಯ ಕಲಿಯಲು ಬರುತ್ತೀಯ ಎಂದು ತಿಳಿದಾಗ! ಸಂಜೆ, ನನ್ನ ವೇದಗಳ ಅಭ್ಯಾಸ ಮುಗಿಸಿ ವೇದ ಪಾಠ ಶಾಲೆಯಿಂದ ಹೊರ ಬಂದವನಿಗೆ ಕಂಡವಳೇ ನೀನು. ನಿನ್ನನ್ನು ಊರಿನಲ್ಲಿ ನೋಡಿದ್ದೇ ವಾರಗಳ ಹಿಂದೆ. ಸುಝುಕಿಯಲ್ಲಿ ಸುಮ್ಮನೆ ಎಲ್ಲೊ ಹೊರಟಿದ್ದಾಗ ರಸ್ತೆಯ ನಡುವೆ ನಿನ್ನ ಎಲ್ಲೊ ಗಮನಿಸಿದ್ದೆ. " ಯಾರೋ ಸುಬ್ಬು...ಹುಡುಗಿ ಮುದ್ದಾಗಿದ್ದಾಳೆ.." ಎಂದಿದ್ದೆ. ' ಏನು ವಿಶ್ವಾ...ವಿಷ್ಯ...' ಎಂಬಂತೆ ಕಣ್ಣಲ್ಲೇ ಕೇಳಿದ್ದ. ಸುಬ್ರಮ್ಹಣ್ಯ ಭಟ್ ಹುಡುಗಿಯರ detailed database! ಪ್ರವರದಂತೆ ಎಲ್ಲಾ ಒಪ್ಪಿಸಿದ್ದ. ಹೆಸರೇ ಚಂದ್ರಿಕಾ, ಮನಸ್ಸು ಹಾಲು ಬೆಳದಿಂಗಳು! ನಾನಿಲ್ಲಿ ಪಾಠಶಾಲೆಯಲ್ಲಿ ವೇದಾದ್ಯಯನ ಮಾಡುತ್ತಿದ್ದರೆ ನನ್ನ ಮಂತ್ರೋಕ್ತಿಗಳಲ್ಲೆಲ್ಲಾ ನೀನೆ ನೀನು! ನನ್ನ ನೋಡಿಯೂ ನೋಡದಂತೆ ಮಾಡಿ ಸುಮ್ಮನೆ ಕಿರುನಗೆ ಬೀರಿದರೆ, ಮನಸ್ಸು... ' ಓಂ ಶಾಂತಿ ಶಾಂತಿ ಶಾಂತಿ...' !

'ಇವನ್ಯಾರೋ ಹುಡುಗ..ಸುಮ್ಮನೆ ದಿಟ್ತಿಸುತ್ತಾನಲ್ಲಾ...' ಅಂದುಕೊಂಡರೆ ಅದು ನಾನೇ ಕಣೆ ಹುಡುಗಿ! ಇಂದು ಹೊರಗಡೆ ಜೋರು ಮಳೆ. ನಿನ್ನ ನೋಡುವ ಯಾವ ಸುಳಿವೂ ಇಲ್ಲ. ನಾಳೆ ವೇದಾಭ್ಯಾಸದ ನೆಪದಲ್ಲಿ ನಿನ್ನನ್ನೇ ನೋಡಲು ಬರುತ್ತೇನೆ. ಮಂತ್ರಗಳ ಸ್ವರದಲ್ಲಿ, ಸ್ವರಗಳ ಏರಿಳಿತದಲ್ಲಿ, ನಿನ್ನನ್ನೇ ಕರೆದರೂ ಕರೆಯುತ್ತೇನೆ! ಮನೆಗೆ ಹೋಗುವ ದಾರಿಯಲ್ಲಿ, ನಿನ್ನ ಕುಡಿನೋಟದಲ್ಲಿ ನನ್ನನ್ನೇ ನೋಡುತ್ತಿರು, ಗೆಳತಿಯರನ್ನು ನೋಡಿದಂತೆ ಮಾಡಿ, ಒಂದು ಸಣ್ಣ ನಗೆ ನೀಡುತ್ತಿರು, ತೀರ ಪ್ರೇಮವೆಂಬ ಪ್ರೇಮದಲ್ಲಿ ಬಿದ್ದರೂ ಬಿದ್ದೇನು! ಬೆಳಗೆದ್ದರೆ, ಆಫೀಸು , ಕೆಲಸ ಇದ್ದಿದ್ದೇ. ಇರಲಿ, ನನ್ನಲ್ಲೂ-ನಿನ್ನಲ್ಲು ಒಂದಷ್ಟು ಪ್ರೇಮ ಕಥೆ. ಒಂದು ಆಷಾಢದ ಸಂಜೆಯಲಿ, ತಿಳಿಗಾಳಿ ಬೀಸುವಾಗ, ನನ್ನ ಪ್ರೀತಿ ನಿವೇದಿಸಿಕೊಂಡರು ನಿವೇದಿಸಿಕೊಂಡೇನು...!!
- ನಿನ್ನವನು.

Thursday, May 14, 2009

ಪ್ರೀತಿಯಲ್ಲಿ ಮೋಹವಿರಲಿ, ನಿಶಿಥವಾದ ವಾಂಛಲ್ಯವಿರಲಿ!




ಗೌತಮಿ,
          ಕಿಟಕಿಯ ತೆಳು ಪರದೆ ಸರಿಸಿ, ನಿನ್ನ ಮುಂಗುರುಳ ಮೇಲಿದ್ದ ತಿಳಿ ಸೂರ್ಯ ಕಿರಣವನ್ನ ನೋಡುತ್ತಿದ್ದೇನೆ and, you look so beautiful. ನಿನಗಿನ್ನು ಸವಿ ನಿದ್ರೆಯ ಜೋಂಪು! ಭಗವಂತ ಭಾನುವಾರಗಳನ್ನು ಏಕೆ ಮಾಡಿದ ಅಂತ ಈಗ ಗೊತ್ತಾಯಿತು. ಪ್ರತಿದಿನ ಜಗತ್ತು ಏಳುವ ಮೊದಲೇ ಎದ್ದು ಬಾಗಿಲಿಗೆ ರಂಗವಲ್ಲಿ ಚೆಲ್ಲಿ, ನಾನು ಆಫೀಸಿನ bag ತಡಕುವ ವೇಳೆಗೆ, ಬೃಂದಾವನದ ತುಳಸಿಗೆ ಮುಡಿಸಿದ ಮಲ್ಲಿಗೆ ನಗುತ್ತಿರುತ್ತದೆ, ನಿನ್ನಂತೆ!  At least, ಭಾನುವಾರಗಳು ನಿನಗೆ ಬೆಚ್ಚಗಿರಲಿ. ಬೆಚ್ಚನೆಯ ಕಾಫಿ ತಂದು ನಿನ್ನ ರಮಿಸುವ ರಮಣ ನಾನು! ನಿನಗಾದರು ಎಲ್ಲಿ, ನಿನ್ನ ಬಾಲ್ಯದ ಗೆಳೆಯ, ನಿನ್ನ ಜೀವನದ ಸಂಗಾತಿಯಾಗುತ್ತಾನೆಂಬ ಕಲ್ಪನೆಯಿತ್ತು? ನನಗೂ ಅಷ್ಟೇ ಗೌತಮಿ. ನಾವಿಬ್ಬರೂ ಒಟ್ಟಿಗೆ ಬೆಳೆದವಾದರೂ, ನೀನು ಓರಗೆಯಲ್ಲಿ ಒಂದು ವರ್ಷ ಚಿಕ್ಕವಳೇ. ಆಗೆಲ್ಲ, ನನಗಿದ್ದ ಒಬ್ಬಳೇ ಗೆಳತಿಯೆಂದರೆ, ಅದು ನೀನೆ!  ಈಗಲೂ ಅಷ್ಟೇ!  ನಾನು ಶಾಲೆಯಿಂದ ಬಂದೊಡನೆ ಸಿಗುತ್ತಿದ್ದವಳು, ನನ್ನ imaginative ಆಟಗಳಿಗೆ ಜೊತೆಯಾಗುತ್ತಿದ್ದವಳು, ನೀನೆ- ನೀನು! ಅಮ್ಮನಿಗೆ ನಿನ್ನ ಕಂಡರೆ ಏನೋ ಅಕ್ಕರೆ.ನಿನಗೆ ಕೊಬ್ಬರಿ ಮಿಠಾಯಿ ಇಷ್ಟ ಅಂತ ವಾರಕ್ಕೆ ಎರಡು ಬಾರಿಯಾದರೂ ಮಾಡುತ್ತಿದ್ದರು. ಕೂಗಿ ಕರೆದರೆ ಅನತಿ ದೂರದ ಮನೆಯಿಂದ ಓಡಿ ಬರುತ್ತಿದ್ದ, ನನ್ನೊಳಗೆ ಬಳ್ಳಿಯಾಗಿ, ನನ್ನ ಹಬ್ಬಿದ, ತಬ್ಬಿದ ಮುದ್ದು ಗೆಳತಿ ನೀನು!

ನಾನು ಇಂಜಿನಿಯರಿಂಗ್ ಗೆ ಸೇರಿದಾಗಲೂ ನನಗಿದ್ದ ಸ್ನೇಹಿತೆಯರೆಂದರೆ, ಸ್ಮಿತಾ, ಪಾವನಿ, ಇಬ್ಬರೇ. ಗೆಳೆಯರೆಂದರೆ ನೆನಪಾಗುತ್ತಿದ್ದವರು, ರಮೇಶ್ ಹಾಗು ಶಶಾಂಕ್. ನಿನ್ನನ್ನು ತೀರ ಗಪ್-ಚುಪ್ ಎಂದು ಪ್ರೀತಿಸಿಬಿಟ್ಟಿದ್ದೆ. ನಿನ್ನನ್ನು ಪ್ರೀತಿಸುವ ಸಂಗತಿ ತಿಳಿದು ನಾನೇ ಸಂತಸಪಟ್ಟಿದ್ದೆ!! ಬಾಲ್ಯದಿಂದಲೂ ಜೊತೆಗಿದ್ದವನು, ಇಷ್ಟಾದರೂ ಪ್ರೀತಿಸದಿದ್ದರೆ, possessive ಆಗದಿದ್ದರೆ ಹೇಗೆ? ನಿನ್ನ ಆ ಇನಿದಾದ ದನಿ, ಗುಲಾಬಿಯ ಎಸಲಿನಂಥ ಕೆನ್ನೆ, ಇಬ್ಬನಿಯಂಥ ತುಟಿಯಲ್ಲಿನ ನಗುವಿಗೆ, I was totally mused!  ನಿನಗೆ-ನಾನು ಗೆಳೆಯನೆಂಬ ಸಲುಗೆ ಹಾಗು ನಿರ್ಮೋಹ ಕಾಳಜಿ. ನನ್ನ ಪ್ರೀತಿಯ ಉತ್ಕಟತೆ ಗೆ, there were no parameters! 

It's my love that has
never lost,
B'cos it has never
tried to win!!

ನನ್ನ ಓದು ಮುಗಿಯುವ ಹೊತ್ತಿಗೆ ನಾನೊಬ್ಬ ಅಪ್ಪಟ ಪ್ರೇಮಿಯಂತಾಗಿಬಿಟ್ಟಿದ್ದೆ!

इतनी ही मोहब्बत करनी आती मुझे,
यही है मेरी मोहब्बत!

ನನ್ನ ಪರೀಕ್ಷೆ, ತಲ್ಲಣಗಳೆಲ್ಲ ಉಗಿದು ಆಸ್ಟ್ರೇಲಿಯ ದ MNC ಗೆ ಕೆಲಸಕ್ಕೆ ಸೇರಿದ ಮೊದಲ ಸಂಬಳದಲ್ಲಿ ಮಾಡಿದ ಮೊದಲ ಕೆಲಸವೆಂದರೆ, ಅಮ್ಮನಿಗೆ ತಂದ ಬೆಳ್ಳಿ ಕುಂಕುಮದ ಭರಣಿ ಹಾಗು ನಿನಗೆ, ಕಿರು ಕಾಲಗೆಜ್ಜೆ. ನಿನ್ನ ಬೆಳ್ಳಿ ಪಾದಗಳಲ್ಲಿ, they look amazing ! ನನ್ನ ಕಿವಿಯಲ್ಲಿರುವ ಇನಿದಾದ ಸಂಗೀತ ನೀನು!

ಗೌತಮಿ, ನಮ್ಮ ದಾಂಪತ್ಯದ ಪ್ರೀತಿಯಲ್ಲಿ ಮೋಹವಿರಲಿ, ಸ್ನೇಹವಿರಲಿ ನಿಶಿಥವಾದ ವಾಂಛಲ್ಯವಿರಲಿ! ನಿನ್ನ ಪುಟ್ಟ ಕುಂಕುಮದ ಹಣೆಗೆ ನನ್ನ  ಹೂಮುತ್ತು. ಕೈಯಲ್ಲಿ ಬೆಚ್ಚಗಿನ ಕಾಫಿ ಇದೆ!  ನನ್ನೊಳಗೆ, ನಿತಾಂತವಾದ, ಅಚಲವಾದ ಪ್ರೀತಿ ಹರಿಯುತಿರಲಿ, ಅನವರತ !!
                                                                                                                                                 - ನಿನ್ನವನು. 


 

Monday, May 4, 2009

ವಾಂಛೆಯ ಶಿಖರಗಳ ಮೇರೆ ಮೀರಿ.....

ಲೈಬ್ರರಿಯಲ್ಲಿ ಸಿಕ್ಕ ಹುಡುಗಿ,

ಎಲ್ಲಿದ್ದೆ ಇಷ್ಟು ದಿನ? ಫಕೀರನೊಬ್ಬನಿಗೆ ಧಿಡೀರನೆ ಲಕ್ಷ ರೂಪಾಯಿ ಸಿಕ್ಕಂತೆ! ಲೈಬ್ರರಿಗೆ ಒಂದು ದಿನವೂ ಬರದ ನನಗೆ ಯಾವುದೋ ಅನಾಮಧೇಯ ಪುಸ್ತಕದೊಳಗೆ ಪ್ರೇಮಪತ್ರ ಸಿಕ್ಕಂತೆ ನೀನು! ಎಲ್ಲವೂ ಕೆಮಿಸ್ಟ್ರಿ ಲೆಕ್ಚರರ್ ನ ದೆಸೆ. ನಿನ್ನೆ ಕೊಟ್ಟಿದ್ದ assignments ಎಲ್ಲ ಮರೆತು ಯಾವುದೋ ಹಳೆಯ ಕ್ರಿಕೆಟ್ ಮ್ಯಾಚ್ ನ ನೋಡುತ್ತಾ ಕುಳಿತಿದ್ದೆ. ಸಂಜೆಯೊಳಗೆ ಬರೆದು ತಂದುಕೊಡು ಎಂಬಂತೆ ಗದರಿದ್ದರು. ಗೆಳೆಯರೆಲ್ಲ ಕ್ಲಾಸಿನೊಳಗಿದ್ದಾರೆ. ನಾನೇನು ಮಾಡಲಿ? ಸುಮ್ಮನೆ ಲೈಬ್ರರಿಗೆ ಬಂದರೆ ಸಿಕ್ಕವಳೇ ನೀನು! ಚಾಂದ್!! ಕೆಮಿಸ್ಟ್ರಿ,assignments ಉ ಎಲ್ಲವೂ ಮರೆತು ಹೋದೆ. And...I ಜಸ್ಟ್ got lost! ನೀನು, ನಿನ್ನ ಗೆಳತಿಯರ ಜೊತೆ ನಡೆದು ಹೋದರೆ ನಿನ್ನ ಹೆಜ್ಜೆಯ ಸಪ್ಪಳಕ್ಕೆ ನನ್ನ ಎದೆಯೊಳಗೆ ನಿನ್ನ ಗೆಜ್ಜೆಯ ನಿನಾದ. ನನ್ನ ಕನಸಿನಲ್ಲಿ ಅಗಾಗ ಬರುತ್ತಿದ್ದ ಹುಡುಗಿ, ನೀನಾ ಅದು? ನಿನ್ನ ನೋಡಿ ನಾನು ಸ್ಥಬ್ದ-ಸ್ಥಬ್ದ! ಆ ಜೇನಿನಂಥ ಕಣ್ಣು, ಮೋಡದ ಹನಿಯಲ್ಲಿ ಅದ್ದಿದಂಥ ತುಟಿ,ನಿನ್ನ ಕೆಂಪು ಕೆನ್ನೆಯ ಸಣ್ಣ ಗುಳಿ-ನಾನಲ್ಲಿ ಬಿದ್ದು ಪ್ರಾಣ ಕಳೆದುಕೊಂಡುಬಿಡಲಾ?

ಹೆಸರು-ಶರ್ಮಿಳ, ಮನೆಯಿರುವುದು ರಥ ಬೀದಿಯ ಗೋಪಾಲ ಶೆಟ್ಟರ ಕಾಫಿ ಪುಡಿ ಅಂಗಡಿಯ ಎದರು, ಅಪ್ಪ- LIC ಯ HOD, ಅಮ್ಮನಿಗೆ ನೀನೊಬ್ಬಳೆ ಮುದ್ದಿನ ಮಗಳು, ನಿಂಗೆ ಪಿಂಕ್ ಬಣ್ಣ ಅಂದ್ರೆ ಇಷ್ಟ-ಇಷ್ಟ, ಪಾನಿಪೂರಿ ಅಂದ್ರೆ ಬಾಯಲ್ಲಿ ನೀರು, ಶಾರುಖ್ ಖಾನ್ ಅಂದ್ರೆ ಪಂಚ ಪ್ರಾಣ, ಅವ್ನ ಎಲ್ಲ ಫಿಲಂನೂ ನೋಡ್ತೀಯ- ಇಷ್ಟೆಲ್ಲಾ ಸುದ್ಧಿ ನಂಗೆ ಹೇಳಿದ್ದು, ನನ್ನ ತಂಗಿ ಸಂಜನ. ನನಗಿಂತಲೂ ಹೆಚ್ಚು ಪ್ರೀತಿಸಿದ್ದು, ನನ್ನ ತಂಗಿ ಸಂಜನಳನ್ನ.ನೀನು ಬಂದೆ ನೋಡು. ನನ್ನ ಜಗತ್ತೇ ಬದಲಾಗಿ ಹೋಯಿತು. ನಮ್ಮ ಕಾಲೇಜಿಗೆ ಬಂದ ಹೊಸ ಹುಡುಗಿ ನೀನು.ನಾವು ನೀಡಿದ welcome party ಯಲ್ಲಿ ನೀನೆಲ್ಲಿದ್ದೆ ಹುಡುಗಿ?

ಮನೆಗೆ ಬಂದೊಡನೆ ಅಮ್ಮನಿಗೆ ಪ್ರವರದ ಹಾಗೆ ಎಲ್ಲವೂ ಒಪ್ಪಿಸಿದೆ.ನಿನ್ನನ್ನು ಲೈಬ್ರರಿಯಲ್ಲಿ ನೋಡಿದ್ದು, ನೋಡಿ ಮೂಕವಿಸ್ಮಿತನಾಗಿದ್ದು...ಎಲ್ಲ. 'ಇವನಿನ್ನೂ ಹುಡುಗು ಮುಂಡೇದು...' ಅಂದುಕೊಂಡರು ಅಮ್ಮ. ಅಮ್ಮ,ನನ್ನ ಪಾಲಿನ best friend! ನನ್ನೆಲ್ಲ ಬದಲಾವಣೆಗಳನ್ನ ಅಮ್ಮ ಸೂಕ್ಷ್ಮವಾಗಿ ಗಮನಿಸುತ್ತಾಳೆ. ಅಪ್ಪನ ಬ್ಯಾಂಕಿನ accounts ನಂಗೆ ಅರ್ಥವಾಗುವುದಿಲ್ಲ. ಅವತ್ತಿನ ರಾತ್ರಿ ನಾನು ಮಾಡಿದ ಮೊದಲ ಕೆಲಸವೆಂದರೆ,ನಿನಗೆ ಬರೆದ ಪತ್ರ. ಪತ್ರ ಬರೆದ ಮೇಲೆ ಏನು ಮಾಡಬೇಕೋ ತಿಳಿಯಲಿಲ್ಲ. ನನ್ನ ಪ್ಯಾಂಟಿನ ಜೇಬಿನೊಳಗೆ ಇಟ್ಟುಕೊಂಡು ಮಲಗಿ ಬಿಟ್ಟೆ!ಸಂಜನಾ,ಬೆಳ್ಳಂ ಬೆಳಿಗ್ಗೆ ಸಂಗೀತ ಕಲಿಯಲು, ರಥಬೀದಿಯ ಆಚೆಯಿರುವ ಸಂಗೀತ ಶಾಲೆಗೆ ಬರುತ್ತಾಳೆ.ನೀನಾಗಲೇ ನಿನ್ನ ಅರಿಶಿನ ಸ್ನಾನ ಮುಗಿಸಿರಬಹುದು. ಪತ್ರವನ್ನು ತಂಗಿಯ ಕೈಲಿ ಕೊಟ್ಟು ಕಳುಹಿಸಿದ್ದೇನೆ.ಇವತ್ತಿನ ತಿಳಿ ಮಧ್ಯಾನ ಅದೇ ಲೈಬ್ರರಿಯ ಮೆಟ್ಟಿಲ ಮೇಲೆ ಕಾದಿರುತ್ತೇನೆ,ನಿನ್ನ ಉತ್ತರಕ್ಕಾಗಿ. ಒಂದು ಸಣ್ಣ ಕಿರುನಗೆಯ ಒಪ್ಪಿಗೆ ಕೊಟ್ಟುಬಿಡು,ನಾನೆಲ್ಲೋ ವಾಂಛೆಯ ಶಿಖರಗಳ ಮೇರೆ ಮೀರಿ......

- ನಿನ್ನವನು.

Friday, January 30, 2009

ನಿನ್ನ ಕೆನ್ನೆಗೆ ಹೂ ಮುತ್ತನಿಟ್ಟು ಎಷ್ಟು ದಿನಗಳಾಯ್ತು...!!

ಪ್ರೀತಿಯ ಶರ್ಮಿ,

ನೀನು,ನಿನ್ನ ಅಮ್ಮನ ಮನೆಗೆ ಹೊರಟು ಸರಿಸುಮಾರು 3 ದಿನಗಳಾಯಿತು.ಆಫೀಸ್ ಇಂದ ಮನೆಗೆ ಬಂದರೆ ಎಂತಹುದೋ ಧೀರ್ಘ ಆಲಸ್ಯ.ಇಲ್ಲಿನ ರಾತ್ರಿ ಕತ್ತಲಾಗಿದೆ! ನಾನು,ಅರ್ಧ ನಿದ್ರೆಯಲ್ಲೆದ್ದ ಮಗುವಿನಂತೆ ಎದ್ದು ಕುಳಿತಿದ್ದೇನೆ.ಇಂಥಹ ನಿರ್ಬಿಡ ರಾತ್ರಿಯಲ್ಲಿ ನೀನೇನು ಮಾಡುತ್ತಿರಬಹುದು ಎಂದು ಯೋಚಿಸಿ ಸುಮ್ಮನಾಗುತ್ತೇನೆ.ಇಲ್ಲಿ ಮನೆಯಲ್ಲಿ ನನಗೊಬ್ಬನಿಗೆ ದಿಗಿಲು! ರೂಮಿನ ಕಿಟಕಿಯಿಂದ ಮುಗಿಲನ್ನೆ ದಿಟ್ಟಿಸುತ್ತೇನೆ. ಆ ಮೋಡದ ತುದಿಯಿಂದ ಚಂದ್ರ ನನ್ನನ್ನೇ ನೋಡುವಂತೆ,ನಿನ್ನ ನೆತ್ತಿಯ ಮೇಲೂ ಚಂದ್ರ ನಿನ್ನನ್ನು ಇಣುಕಿ ನೋಡುತ್ತಿರಬಹುದು! ನಾನು ಬಾನಾಗಿ,ಬಾನಿನ ಚಂದ್ರನಾಗಿ ನಿನ್ನ ಮೆಲ್ಲನೆ ಇಣುಕಿ ನೋಡುವಾಸೆ! ನಿನ್ನ ಸವಿನಿದ್ರೆಯಲ್ಲಿ ಒಂದು ಸುಂದರ ಕನವರಿಕೆ. ಅದು ನನ್ನದೇ ನೆನಪು ಗೆಳತಿ. ಮತ್ತೆ ಮಲಗಲು ಯತ್ನಿಸುತ್ತೇನೆ.ನಿನ್ನ ನೆನಪಿನಲ್ಲಿ ಬಗಲು ಬದಲಿಸುತ್ತೇನೆ!


रात अन्धेरा जल्ता है,
अन्दर तेरा प्यार...!

ಮುಂಜಾನೆ,ಮನೆಯ ಮುಂದಿನ ಹುಲ್ಲುಗಾವಲಿನ ಮೇಲೆ ನಡೆದುಹೋದರೆ ಎಂತಹುದೋ reluctance. ದೂರದ ಬೆಣಚು ಕಲ್ಲಿನ ಮೇಲೆ ಕುಳಿತುಕೊಂಡರೆ ಕಾಡುವ ಏಕಾಂಗಿತನ. ಮನೆಯ ತುಂಬಾ ನಿಶ್ಯಬ್ದ,ನೀರವ. ಇಲ್ಲೆಲ್ಲೋ ನಿನ್ನ ಗೆಜ್ಜೆಯ ಸಪ್ಪಳ! ಅರೆ! ಇದೆಂಥಹ ಭಾವ ನನ್ನದು? ನಾನೇ ಸೋಸಿಕೊಂಡ ಬಿಸಿ ಬಿಸಿ ಕಾಫಿಗೆ ಸಕ್ಕರೆ ತುಸು ಕಮ್ಮಿ ಎನಿಸಿ ಮತ್ತಷ್ಟು ಹಾಕಿಕೊಂಡೆ. ನೀನು ಮಾಡಿಕೊಡುತ್ತಿದ್ದ ಕಾಫಿಗೆ ನಿನ್ನ ಪುಟ್ಟ ಕಿರು ಬೆರಳು ತಾಕಿ, ಕಾಫಿ ನಿನ್ನಷ್ಟೇ ಸಿಹಿ-ಸಿಹಿ!ನಾನಿಲ್ಲಿ,ನಿನ್ನ ತುಂಬಾ miss ಮಾಡಿಕೊಳ್ಳುತ್ತಿದ್ದೇನೆ. ನೀನಲ್ಲಿ,ನಿನ್ನ ಅಮ್ಮನ ಜೊತೆ ಕುಳಿತುಕೊಂಡು,ನಮ್ಮಿಬ್ಬರ ದಾಂಪತ್ಯದ ಸುಖವನ್ನು ಹಂಚಿಕೊಳ್ಳುತ್ತಿರಬಹುದು ! ಸಂಕ್ರಾಂತಿಗೆ ತೆಗೆದುಕೊಟ್ಟ ಹೊಸ ಸೀರೆಯನ್ನು ಅಮ್ಮನಿಗೆ ತೋರಿಸುತ್ತಿರಬಹುದು.

ನನ್ನ ಭಾನುವಾರದ gym ನ ವ್ಯಾಯಾಮವೆಲ್ಲ ಮುಗಿಸಿ ಮನೆಗೆ ಬಂದೊಡನೆ,ನನ್ನನ್ನು ಕೀಟಲೆ ಮಾಡಿ,ನನ್ನನ್ನು ಹೌಹಾರುವಂತೆ ಮಾಡುತ್ತಿದ್ದವಳು ನೀನು. ನಾನು,ಮೊದಲೇ ಅಪಾರ ಮೌನಿ! ನನ್ನನ್ನು ಮಾತಿಗೆಳೆದು ಕೂರಿಸುತ್ತಿದ್ದವಳೇ ನೀನು. ನಿನ್ನೋಳಗೊಂದು ಮಾತನಾಡುವ ಗಿಳಿ! ನೀನು-ನನ್ನೊಡನೆ ಮಾತನಾಡುತ್ತಾ ಕುಳಿತರೆ,ನಾನು-ನಿನ್ನ ಮಾತಿನೊಳಗೆ ತನ್ಮಯ! ನಿನ್ನ ಮಾತು,ನೀನು ಮಾಡಿಕೊಡುವ ಕಾಫಿ-ಎರಡೂ ಅಧ್ಬುತವಾದ ಸಮ್ಮೋಹಕ! ಇವತ್ತು,ಮನೆಯೊಳಗೆ ನನ್ನಷ್ಟೇ ಮೌನ. ಬೆಳಗಿನ ಜಾವದಿಂದ ನಿನ್ನೊಡನೆ ಮಾತನಾಡಲು ಪ್ರಯತ್ನಿಸುತ್ತಿದ್ದೇನೆ.ನಿನ್ನ ಮೊಬೈಲ್ನಲ್ಲೆಂಥ ನಿದ್ದೆಯ ಜೋಂಪು?!

ನನ್ನ ಇಂದಿನ ಭಾನುವಾರದ ಸುಖವನೆಲ್ಲ destroy ಮಾಡಿದ ಮುದ್ದು ಕಳ್ಳಿ ನೀನು!ನೀನಿಲ್ಲದೆ ಮನವೆಲ್ಲ 'ಬಿಕೋ..' ಎನ್ನುತಿದೆ. ನಮ್ಮಿಬ್ಬರ ಮದುವೆಯಾಗಿ ಮುಂದಿನ ಭಾನುವಾರಕ್ಕೆ ಸರಿಯಾಗಿ ಒಂದು ವರ್ಷ! ನಮ್ಮ anniversary ದಿನಕ್ಕೆ ನನ್ನ ಗೆಳೆಯ-ಗೆಳತಿಯರ ದೊಡ್ಡ ಗುಂಪನ್ನೇ ಆಹ್ವಾನವಿದೆ! ನಿನಗೊಂದು ಸುಂದರ gift ಖರೀದಿಸಿದ್ದೇನೆ. ನೀನಿಲ್ಲದೆ, ನಾನೊಬ್ಬನೇ ಗುನುಗಿಕೊಳ್ಳುತ್ತೇನೆ..

अब मुझे रात-दिन,
तुम्हारा ही ख़याल है...!


ನಾನು ನಿನ್ನ ಕೆನ್ನೆಗೊಂದು ಮುತ್ತನಿತ್ತು ಎಷ್ಟು ದಿನಗಳಾಯ್ತು?!! ತಾರೆಗಳು ನಕ್ಕಾವು!! ಮುಗಿಲಲ್ಲೂ ನಾಚಿಕೆಯ ಕೆಂಪು! ಇನ್ನೊಂದು ರಾತ್ರಿಯೊಳಗೆ,ನನ್ನ ಬಳಿಗೆ ಓಡಿ ಬಂದುಬಿಡು ಗೆಳತಿ. ಬೆಂಬಿಡದ ರಾತ್ರಿಗಳಲ್ಲೂ ಜೀವ ತವಕಿಸಿ ಕಾಯುತ್ತಿರುತ್ತೀನಿ...!

-ನಿನ್ನವನು.

Sunday, January 25, 2009

ನನ್ನ ಭಯಕ್ಕೆ, ನಿನ್ನದೇ ಧೈರ್ಯ ಕಣೋ..

ಪ್ರೀತಿಯ ಗೆಳೆಯ,

ನನ್ನೊಳಗೆ ಒಂದು ಭೋರ್ಗರೆವ ಮೌನ.ನಾನು ಮೌನಕ್ಕಿಂತಲೂ ಮೌನಿ! ಇಂಥಹ ಏಕಾಂತದಲ್ಲಿ ನನ್ನೊಳಗೆ ಒಂದು ಕಾವ್ಯದ ಉಗಮ.ಮನಸ್ಸು ನಿನ್ನ ನೆನೆದು ಚಡಪಡಿಸುತ್ತದೆ.ನನ್ನೊಳಗೊಬ್ಬ ಕವಿಯ ಜನನ! ನನಗೆ ಹೋಲಿಕೆಗಳು ಸಿಗದೇ ಒದ್ದಾಡುತ್ತದೆ.


मेरी सामने
तू हवा की तरह..
उन घूमती राहोमे..
मै आ जाऊंगी...



ಯಾವುದೋ ಹಾಡಿನ ಅರೆ-ಬರೆ ನೆನಪು. Basically, ನಾನು ಇಂತಹ ಹುಡುಗಿಯಲ್ಲ. ನನ್ನೊಳಗೆ ಇಂತಹ ಭಾವನೆಗಳೆಲ್ಲ ಹೊಸೆದು ತಂದಿಟ್ಟವರು ಯಾರೋ! ಇವೆಲ್ಲ, ಒಂದೇ ದಿನದಲ್ಲಿ ಶುರುವಾದಂತಹುದೂ ಅಲ್ಲ. ನಿನ್ನೊಡನೆ ಮಾತನಾಡಿದ ಮಾತನಾಡಿದ ಮೊದಲ ದಿನ, It was very casual. ಆದರೆ ನಂತರದ ದಿನಗಳು, they were really amazing! ನಿನ್ನ ಬುದ್ದಿವಂತಿಕೆ, smartness, ನಿನ್ನ ಕೀಟಲೆ.. and they were the happening days. ನೀನೆಷ್ಟು ಒಳ್ಳೆಯ ಹುಡುಗ! ನನ್ನ ವಯಸ್ಸಿಯ ಎಲ್ಲ ಹುಡುಗಿಯರಂತೆ ನನ್ನಲ್ಲು ಒಂದು ಆಸೆಯ ಪುಳಕ.ನನಗೆ ಗೊತ್ತು, I'm very much normal. ಇದಕ್ಕೆ 'Crush' ಅನ್ನುತ್ತಾರೋ 'Brush' ಅನ್ನುತ್ತಾರೋ ಗೊತ್ತಿಲ್ಲ! For me, it's just the beginning of love!

रंग दे..रंग दे..
मुझे रंग दे..
.!

ನನ್ನ earphone ಒಳಗಿನ ಹಾಡಿನಿಂದ ಬಂದು ಹಾಡುವವನು, ಸುಮ್ಮನೆ ಕುಳಿತಾಗ ಬಂದು ನೆನಪಾಗಿ ಕಾಡುವವನು, ನನ್ನ ನಿದ್ರೆಯ ಒಳಗಿನ ಕನಸಾಗುವವನು ನೀನು! ನನ್ನೆಲ್ಲ ಗೆಳತಿಯರಿಗೆ,'ಇವನೇ ನನ್ನ ಪ್ರೀತಿಯ ಹುಡುಗ!' ಎಂದು ಹೆಮ್ಮಯಿಂದ ಹೇಳಿಬಿಡುವ ಆಸೆ. ಮನಸ್ಸು ನಾಚಿಕೆಯಿಂದ ಕರಗಿ ನೀರಾಗುತ್ತದೆ.ಇಂಥಹ ಭಾವನೆಗಳಲ್ಲಿ,ಎಷ್ಟು ಸರಿ,ಎಷ್ಟು ತಪ್ಪು, ನನಗೆ ಗೊತ್ತಿಲ್ಲ.But for me, It's just the beginning of love!!

ಸುಮ್ಮನೆ ಸಂಜೆಯೆಲ್ಲ ನಿನಗೆ phone ಮಾಡಿ ಮಾತನಾಡಬೇಕೂಂತ,ನಮ್ಮಿಬ್ಬರ tuition ಮುಗಿದಮೇಲೆ, ನಾವಿಬ್ಬರೇ ಅಷ್ಟು ದೂರ ನಡೆದುಬಿಡಬೇಕೂಂತ, ಹೊತ್ತಿಲ್ಲದ ರಾತ್ರಿಗಳಲ್ಲಿ ನಿನಗೆ SMS ಕಳಿಸಬೇಕೂಂತ, ಮತ್ತೆ...ನಿನ್ನ ಸುಮ್ಮ ಸುಮ್ಮನೆ ಕೀಟಲೆ ಮಾಡಬೇಕೂಂತ...!

ನೀನು,ನನ್ನ ಹೊಸ ಬಟ್ಟೆಯನ್ನು ಕಂಡು,'ಎಷ್ಟು ಚೆನ್ನಾಗಿದೆ...?!' ಎಂದು ಬೆರಗಾಗಿ,ನನ್ನ ಕೆಂಪು ಕೆನ್ನೆಯ ಒಳಗಿನ ಗುಳಿಯನ್ನು ಕಂಡು ಇಷ್ಟ ಪಡುವ,ನನ್ನ ಹಿಂದಿನಿಂದ ಬಂದು ನನ್ನ ಉದ್ದದ ಜಡೆಯನ್ನು ಎಳೆದು ಕೀಟಲೆ ಮಾಡುವ ಹುಡುಗ! ನಿನಗೆ,ನಾಳಿನ ಭಾನುವಾರದ ಸಂಜೆ ಬಂದು,ನನ್ನ ಪ್ರೀತಿಯನ್ನು ಹೇಳೋಣ ಅಂತ. ನನ್ನ ಭಯಕ್ಕೆ, ನಿನ್ನದೇ ಧೈರ್ಯ! ನೀನು ನನಗಾಗಿ ಕಾಯುತ್ತಿರುತ್ತಿ ಅಲ್ಲವ?!

-ನಿನ್ನ ಪ್ರೀತಿಯ ಗೆಳೆತಿ.