Wednesday, October 29, 2008

ಪ್ರೀತಿಯ ದೀಪ್ತಿ.....

ಪ್ರೀತಿಯ ದೀಪ್ತಿ,

ಕಾರ್ತಿಕ ಮತ್ತೊಮ್ಮೆ ದೀಪ ಬೆಳಗಿ ನಿಂತಿದೆ.ನನ್ನಯ ದೀಪಾವಳಿಗೆ ನಿನ್ನ presence ಗೆ, ನನ್ನ ಮನಸ್ಸೆಲ್ಲ ದೇದೀಪ್ಯಮಾನ. ಹಬ್ಬಗಳು ನಮ್ಮ ಪಾಲಿಗೆ ಕೇವಲ ಹಬ್ಬಗಳಲ್ಲ.They are not mere festivals. They are something beyond it. ಕಳೆದ ದೀಪಾವಳಿಗೆ ನೀನು present ಮಾಡಿದ್ದ ತಿಳಿ ನೀಲಿ shirt,jeans pant ನಲ್ಲಿ ನಾನು ಎಷ್ಟು ಚೆನ್ನಾಗಿ ಕಾಣುತ್ತೀನಿ ಗೊತ್ತ! ಈ ಸಲ, ನಾನು-ನಿನಗೆ, ಒಂದು ಪಿಂಕ್ ಬಣ್ಣದ ಚೂಡಿದಾರ ತೆಗೆದಿಟ್ಟಿದ್ದೇನೆ. ನಿನ್ನ ಆ ತಿಳಿ ಕೆಂಪು ಕೆನ್ನೆಯ ನಡುವೆ, ನೀನು ಎಷ್ಟು ಮುದ್ದಾಗಿ ಕಾಣುತ್ತೀಯ ಎಂದು ಯೋಚಿಸುತ್ತಾ ಕುಳಿತ್ತಿದ್ದೇನೆ!!


ये रात है हसीं..
दर्द भी...है जवान..


ಇವತ್ತಿನ ರಾತ್ರಿ ನಿದ್ರಾಹೀನ!ಬಿಮ್ಮನೆ ಎದ್ದು ಕುಳಿತು ಪತ್ರ ಬರಿಯುತ್ತಿದ್ದೇನೆ. ನಾಳಿನ ಬೆಳಗು ಕಣ್ತೆರೆದರೆ, " ದೀಪಾವಳಿ".ಇಲ್ಲಿ ಸಣ್ಣಗೆ ಹಿಮ ಬೀಳುತ್ತಿದೆ.ನೀನೂ,ನನ್ನ ಕಿವಿಯಲ್ಲಿ ಮೆಲ್ಲಗೆ ಉಸಿರಿದ ಹಾಗೆ ಹಿಮದ ಸದ್ದು. ಹಬ್ಬದ ಬೆಳಿಗ್ಗೆ ಎಂದಿನಂತೆ ಅಭ್ಯಂಜನ ಮುಗಿಸಿ ಮನೆಗೆ ಬರುತ್ತೇನೆ.ಪ್ರತಿ ಹಬ್ಬದ ನಮ್ಮ ಮೊದಲ ಕಾಯಕ "ದೇವಸ್ಥಾನ". ನಿನ್ನ kinetic ನಲ್ಲಿ ಸೂರ್ಯ ರಶ್ಮಿ ಕಣ್ತೆರೆಯುವ ಮುನ್ನ ಹೊರಟು ಬಿಡೋಣ. ನಿನಗೆ ಎಷ್ಟು ಅವಿಚ್ಚಿನ್ನ ಭಕ್ತಿ! ನಾನಾದರೂ ದೇವರಾಗಿರುತ್ತಿದ್ದರೆ ನಿನ್ನ ಎದರು ನಿಂತು "ತಥಾಸ್ತು" ಎಂದು ಬಿಡುತ್ತಿದ್ದೆ!! ನಿನ್ನ ಆ ಪುಟ್ಟ ಬಿಂದಿಯ ಕೆಳಗೆ ಇಟ್ಟ ದೇವರ ಕುಂಕುಮದಲ್ಲಿ ಎಷ್ಟು ಲಕ್ಷಣವಾಗಿ ಕಾಣುತ್ತೀಯ ಗೊತ್ತ?!ನಾನಿಲ್ಲಿ ನಿನ್ನನ್ನೇ ಧೇನಿಸುತ್ತಿದ್ದೇನೆ!

ಸಂಜೆಯಾಯಿತೆಂದರೆ ಜಗುಲಿಯ ಮೇಲಿಡುವ ಹಣತೆಯಲ್ಲಿ ಏನು ಓರಣ? Perhaps,ನನಗೆ ಆ ನಿನ್ನ ಓರಣ ಇಷ್ಟವಾಗುತ್ತದೆ.ನೀನೂ ಉಡುವ ಬಟ್ಟೆಯಿಂದ ಹಿಡಿದು,ನೀನು ಮಾಡುವ ಪ್ರತಿ ಕೆಲಸದ ಮಟ್ಟಸ ಇಷ್ಟವಾಗುತ್ತದೆ.ನಾಳೆಯ ಹಬ್ಬದ ರಾತ್ರಿಗೆ ಒಂದಷ್ಟು,ಹೂ-ಕುಂಡ,ಹೂ-ಬಾಣ ಹಾಗು ನಿನ್ನ ಹೂ-ನಗೆ!!ಸಾಲಾಗಿ ಜೋಡಿಸಿದ ನಿನ್ನ ದಂಥಪಂಕ್ಥಿಯಲ್ಲೂ ಆ ಸಾಲು ಹಣತೆಯ ಬೆಳಗು!

ಕಳೆದೆಲ್ಲ ದೀಪಾವಳಿಗೆ ನಮ್ಮಿಬ್ಬರ ನಡುವೆ ಏನೆಲ್ಲ ಇರುತ್ತಿದ್ದವು, ಯೇನುರುತ್ತಿರಲಿಲ್ಲ? ನಮ್ಮಿಬ್ಬರ ಬಾಲ್ಯ,ಆಟ,ನಮ್ಮ ಗೆಳೆತನ ಹಾಗು ನಿನ್ನ ಸುಂದರ ಮುನಿಸು! ಇಷ್ಟರಲ್ಲೇ ನಾವಿಬ್ಬರೂ ಇಷ್ಟು ಎತ್ತರಕ್ಕೆ ಬೆಳೆದ ಮಕ್ಕಳು!ಕಳೆದ ವರ್ಷದ ದೀಪಾವಳಿಯಲ್ಲಿ, ಹಣತೆಗಳ ನಡುವೆ ಕುಳಿತುಕೊಂಡು ನಾವಿಬ್ಬರು ತೆಗೆಸಿಕೊಂಡ photo ನೋಡುತ್ತಾ ಕುಳಿತಿದ್ದೇನೆ.ನನ್ನ ಮನಸಿನಲ್ಲಿ, ನಿನ್ನದೇ ಸೌಂದರ್ಯ ಲಹರಿ! ಇಪ್ಪತ್ತಮೂರು ದೀಪಾವಳಿಗಳನ್ನು ಒಟ್ಟಿಗೆ ಕಳೆದಿದ್ದೇವೆ. ಇಪ್ಪತ್ತ್ನಲ್ಕನೆ ದೀಪಾವಳಿಯ ಬೆಳಗನ್ನು ಎದರು ನೋಡುತ್ತಿದ್ದೇನೆ. ಈ ರಾತ್ರಿಯ ನೀರವ ಮೌನದಲ್ಲಿ ನಿನ್ನ ಬಳಿ ಮಾತನಾಡುವುದು ಬಹಳಷ್ಟಿದೆ,ನಿದ್ರೆ ಬರದಿದ್ದರೆ ಬಂದು ಬಿಡು ಗೆಳತಿ...

-ನಿನ್ನವನು.

No comments: