Wednesday, December 24, 2008

ಆ ಮೋಡದ ತುದಿಯಿಂದ ನಿನ್ನ ನಗಿಸುವ ಆಸೆ!

ಅನುರೂಪದ ಗೆಳತಿ,

ನಿನಗಿದು ಎಷ್ಟನೇ ಪತ್ರ? ನನಗೆ ನೆನಪಿಲ್ಲ! ನನ್ನ ನೆನಪಿನ ತುಂಬಾ ನಿನ್ನದೇ ಒಲವಿನ ಬಿಂಬ. ನನ್ನಂಥ ಹುಂಬನ ಕೈಗೆ ಸಿಗಲು ಅಮೋಘ ಹದಿನಾರು ವರ್ಷ ಕಾಯಬೇಕಾಯಿತಲ್ಲ ಹುಡುಗಿ,ಎಲ್ಲಿದ್ದೆ ಇಲ್ಲಿಯ ತನಕ?! ಹಾದಿ ತಪ್ಪಿದ ದಾರಿಯಲ್ಲಿ ಒಂದು ಕನಕ ಬಳ್ಳಿ ಕಾಲಿಗೆ ತೊಡವಿಕೊಂಡಂತೆ.ಇಂಥಹ ದಾರಿಯಲ್ಲಿ ನಿನ್ನೊಡನೆ ನೂರು ಬಾರಿ ಜಾರಿ ಬಿಡುತ್ತೇನೆ,ಒಂದು ಅನಿಶ್ಚಿತ ಗವಿಯೊಳಗೆ!

ನಮ್ಮಿಬ್ಬರ ಸ್ನೇಹಕ್ಕೆ,ಬಾಂಧವ್ಯಕ್ಕೆ ಪ್ರೀತಿ ಎಂದು ಹೆಸರಿಟ್ಟವರು ಯಾರು? ನಮ್ಮದು,ಪ್ರೀತಿಗೂ ಮೀರಿದ ಸ್ನೇಹ ಅಥವಾ ಸ್ನೇಹಕ್ಕೂ ಮೀರಿದ ಪ್ರೀತಿ! ನಿನ್ನ ಸ್ನೇಹವೇ ನನಗೆ ಅನುಭೂತಿ!ಒಂದು ಭಾವ ಝರಿಯಲ್ಲಿ ತೀಲಿಹೊಗಿದ್ದೇನೆ.ನೀನು ಝರಿಯ ನಡುವೆ ಅಮರಿಕೊಂಡ ಪ್ರೀತಿಯ ಬುಗ್ಗೆ! ನನ್ನ ಮನಸ್ಸು ಸುಮ್ಮನೆ ಗುನುಗಿಕೊಂಡ ಸುಚೆತನ ಗಾನ ಲಹರಿ. ಒಂದು ಧೀರ್ಘ ಕನಸಿನೊಳಗೆ ಕಳೆದುಹೋಗಿದ್ದೇನೆ.ಒಂದು ಅನವರತ ಸವಿ ನಿದ್ರೆಯೊಳಗೆ ಮತ್ತೆ ಹೋಗುವ ಬಯಕೆ...!

ಇಂಥಹ ನಿರ್ಜೀವ ಪತ್ರಗಳಿಗೂ ಭಾವ ತುಂಬಿದವಳು ನೀನು.ನನ್ನ ಭಾವದ ರೂಪು-ರೇಷೆ ,ನೀನು ಕಣೋ ಗೆಳತಿ. ನಾನಿಲ್ಲಿ ರೆಕ್ಕೆ-ಪುಕ್ಕ ಕಟ್ಟಿಕೊಂಡು ಆ ಮೋಡದ ತುದಿಗೆ ಹೋಗಿ ಮೆಲ್ಲನೆ ನಿನ್ನ ನಗಿಸುವ ಆಸೆ.ಮೋಡದೊಳಗಿನ ಮಿಂಚಂತೆ,ನಿನ್ನ ಕಣ್ಣ ಅಂಚಂತೆ!

-ನಿನ್ನವನು!