Thursday, November 6, 2008

ಜೀವದ ಗೆಳೆಯ....

ಪ್ರೀತಿಯ ಸಾವಂತ್,

ನನ್ನ ಕಣ್ಣುಗಳಲ್ಲಿಂದು ಬೆಳಕಿನ ಹಬ್ಬ. ಅಥವಾ ಅಂಥಹ ನಾವೀನ್ಯತೆಗೆ ಏನೆನ್ನಬೇಕು ತಿಳಿಯಲಿಲ್ಲ. ಹಬ್ಬವೂ ಸಹ ಒಂದು ಹೊಸತನದ ಆಗಮನ,ಒಂದು ಸಂಭ್ರಮ. ಮನಸ್ಸು ಪುಟಿದೇಳುವ ಅಂತರ ಗಂಗೆ! ಇಂಥಹ ಎಲ್ಲ ಬದಲಾವಣೆಗಳು ಎಲ್ಲಾ ಹುದುಗಿಯರಂತೆ ನನ್ನಲ್ಲೂ ಸಾಮಾನ್ಯ. ಇದಕ್ಕೆ biology ಯಲ್ಲಿ ಬೇರೆಯದೇ ಹೆಸರಿದೆ! I do not bother! ನನ್ನಲ್ಲಿನ ಈ ಆಸೆಗೆ, ಕಣ್ಣಲ್ಲಿನ ಬೆಳಕಿಗೆ ಹೊಳಪು ತಂದವನು ನೀನು.

Indeed,ನನಗೆ ಪತ್ರ ಎಂದರೆ ತೀರ uncommon.ಇಂದಿನ ಕಾಲದ ಹುಡುಗಿ ನಾನು. chat ಮಾಡುತ್ತಾ, SMS ಬರೆಯುತ್ತಾ ಕುಳಿತಿರುತ್ತೇನೆ. ಇಂದು ತುಂಬ orthodox ಆಗಿ ಪತ್ರ ಬರೆಯುತ್ತಿದ್ದೇನೆ.ಇಲ್ಲಿ ನನ್ನ ಮನಸ್ಸಿನ ಭಾವನೆಗಳೆ ದೊಡ್ಡ paradox. ಇವುಗಳಿಗೆಲ್ಲ ನನ್ನ ಬಳಿ ವಿವರಣೆಗಳಿಲ್ಲ. I have no explanations left! Biology ಇದಕ್ಕೆ hormone ನ ಕಾರಣ ಕೊಡುತ್ತದೆ! I do not care! ಸುಮ್ಮನೆ ನಿನ್ನ ಕನಸುಗಳಲ್ಲಿ ಕಳೆದುಹೋಗಿದ್ದೇನೆ.

ನಮ್ಮ ತರಗತಿಗಳ ಮೊದಲ ದಿನವೇ ಕಣ್ಸೆಳೆದವನು ನೀನು. ಮೊದಲ ಸಾಲಿನಲ್ಲಿ ಕುಳಿತು ನೀನು ಪಾಠ ಕೇಳುತ್ತಿದ್ದರೆ ಪಾಠದಲ್ಲಿ ನೀನು ಮಗ್ನ. ನಮ್ಮ ತರಗತಿಯಲ್ಲಿ, tall ಆಗಿ, ಬೆಳ್ಳಗಿದ್ದ ಹುಡುಗ-ನಿನಗೆ ನನ್ನದೇ ದೃಷ್ಟಿಯಾದೀತು! ಸುಮ್ಮನೆ ನೀನು ನಮ್ಮ ಹುಡುಗಿಯರ ಗುಂಪಿನ ಕಡೆ ನೋಡಿದಾಗ, ನೀನು ನನ್ನನ್ನೇ ಹುಡುಕುತ್ತೀಯ? ನನ್ನ ಎದೆಯಲ್ಲಿ ಒಂದು inexplicable ತಳಮಳ. Psychology ಇದಕ್ಕೆ infatuation ಅನ್ನುತ್ತದೆ. But, I do not mind! ಇಂದಿಗೆ ನಮ್ಮ ಗೆಳೆತನಕ್ಕೆ 2 ವರ್ಷ!

ಇಂಥಹ ಆಸೆಗಳಿಗೆ ಬಣ್ಣ, ನನ್ನ human instinct ಗಳಿಗೆ ಜೀವ ಹಾಗು ಕನಸುಗಳಿಗೆ ರೆಕ್ಕೆ ಕೊಟ್ಟವನು, ನೀನು ಕಣೋ ಗೆಳೆಯ. ಆ ಪತ್ರ ನಿನ್ನ ಕೈಗೆ ಕೊಡಬೇಕೆಂದು ನನ್ನ ಬಯಕೆ. ಆದರೆ ಪಾಪ ಹುಡುಗಿ, ನನಗೆಲ್ಲಿ ಅಷ್ಟು ಧೈರ್ಯ ಬರಬೇಕು?! ನೀನು ಕುಳಿತುಕೊಳ್ಳುವ ಬೆಂಚಿನ ತುದಿಗೆ ಇಟ್ಟಿರುತ್ತೇನೆ, ನಿನಗೆ ಮಾತ್ರ ಎಟಕುವ ಹಾಗೆ!


-ನಿನ್ನ ಪ್ರೀತಿಯ ಗೆಳತಿ.

No comments: