
ಗೌತಮಿ,
ಕಿಟಕಿಯ ತೆಳು ಪರದೆ ಸರಿಸಿ, ನಿನ್ನ ಮುಂಗುರುಳ ಮೇಲಿದ್ದ ತಿಳಿ ಸೂರ್ಯ ಕಿರಣವನ್ನ ನೋಡುತ್ತಿದ್ದೇನೆ and, you look so beautiful. ನಿನಗಿನ್ನು ಸವಿ ನಿದ್ರೆಯ ಜೋಂಪು! ಭಗವಂತ ಭಾನುವಾರಗಳನ್ನು ಏಕೆ ಮಾಡಿದ ಅಂತ ಈಗ ಗೊತ್ತಾಯಿತು. ಪ್ರತಿದಿನ ಜಗತ್ತು ಏಳುವ ಮೊದಲೇ ಎದ್ದು ಬಾಗಿಲಿಗೆ ರಂಗವಲ್ಲಿ ಚೆಲ್ಲಿ, ನಾನು ಆಫೀಸಿನ bag ತಡಕುವ ವೇಳೆಗೆ, ಬೃಂದಾವನದ ತುಳಸಿಗೆ ಮುಡಿಸಿದ ಮಲ್ಲಿಗೆ ನಗುತ್ತಿರುತ್ತದೆ, ನಿನ್ನಂತೆ! At least, ಭಾನುವಾರಗಳು ನಿನಗೆ ಬೆಚ್ಚಗಿರಲಿ. ಬೆಚ್ಚನೆಯ ಕಾಫಿ ತಂದು ನಿನ್ನ ರಮಿಸುವ ರಮಣ ನಾನು! ನಿನಗಾದರು ಎಲ್ಲಿ, ನಿನ್ನ ಬಾಲ್ಯದ ಗೆಳೆಯ, ನಿನ್ನ ಜೀವನದ ಸಂಗಾತಿಯಾಗುತ್ತಾನೆಂಬ ಕಲ್ಪನೆಯಿತ್ತು? ನನಗೂ ಅಷ್ಟೇ ಗೌತಮಿ. ನಾವಿಬ್ಬರೂ ಒಟ್ಟಿಗೆ ಬೆಳೆದವಾದರೂ, ನೀನು ಓರಗೆಯಲ್ಲಿ ಒಂದು ವರ್ಷ ಚಿಕ್ಕವಳೇ. ಆಗೆಲ್ಲ, ನನಗಿದ್ದ ಒಬ್ಬಳೇ ಗೆಳತಿಯೆಂದರೆ, ಅದು ನೀನೆ! ಈಗಲೂ ಅಷ್ಟೇ! ನಾನು ಶಾಲೆಯಿಂದ ಬಂದೊಡನೆ ಸಿಗುತ್ತಿದ್ದವಳು, ನನ್ನ imaginative ಆಟಗಳಿಗೆ ಜೊತೆಯಾಗುತ್ತಿದ್ದವಳು, ನೀನೆ- ನೀನು! ಅಮ್ಮನಿಗೆ ನಿನ್ನ ಕಂಡರೆ ಏನೋ ಅಕ್ಕರೆ.ನಿನಗೆ ಕೊಬ್ಬರಿ ಮಿಠಾಯಿ ಇಷ್ಟ ಅಂತ ವಾರಕ್ಕೆ ಎರಡು ಬಾರಿಯಾದರೂ ಮಾಡುತ್ತಿದ್ದರು. ಕೂಗಿ ಕರೆದರೆ ಅನತಿ ದೂರದ ಮನೆಯಿಂದ ಓಡಿ ಬರುತ್ತಿದ್ದ, ನನ್ನೊಳಗೆ ಬಳ್ಳಿಯಾಗಿ, ನನ್ನ ಹಬ್ಬಿದ, ತಬ್ಬಿದ ಮುದ್ದು ಗೆಳತಿ ನೀನು!
ನಾನು ಇಂಜಿನಿಯರಿಂಗ್ ಗೆ ಸೇರಿದಾಗಲೂ ನನಗಿದ್ದ ಸ್ನೇಹಿತೆಯರೆಂದರೆ, ಸ್ಮಿತಾ, ಪಾವನಿ, ಇಬ್ಬರೇ. ಗೆಳೆಯರೆಂದರೆ ನೆನಪಾಗುತ್ತಿದ್ದವರು, ರಮೇಶ್ ಹಾಗು ಶಶಾಂಕ್. ನಿನ್ನನ್ನು ತೀರ ಗಪ್-ಚುಪ್ ಎಂದು ಪ್ರೀತಿಸಿಬಿಟ್ಟಿದ್ದೆ. ನಿನ್ನನ್ನು ಪ್ರೀತಿಸುವ ಸಂಗತಿ ತಿಳಿದು ನಾನೇ ಸಂತಸಪಟ್ಟಿದ್ದೆ!! ಬಾಲ್ಯದಿಂದಲೂ ಜೊತೆಗಿದ್ದವನು, ಇಷ್ಟಾದರೂ ಪ್ರೀತಿಸದಿದ್ದರೆ, possessive ಆಗದಿದ್ದರೆ ಹೇಗೆ? ನಿನ್ನ ಆ ಇನಿದಾದ ದನಿ, ಗುಲಾಬಿಯ ಎಸಲಿನಂಥ ಕೆನ್ನೆ, ಇಬ್ಬನಿಯಂಥ ತುಟಿಯಲ್ಲಿನ ನಗುವಿಗೆ, I was totally mused! ನಿನಗೆ-ನಾನು ಗೆಳೆಯನೆಂಬ ಸಲುಗೆ ಹಾಗು ನಿರ್ಮೋಹ ಕಾಳಜಿ. ನನ್ನ ಪ್ರೀತಿಯ ಉತ್ಕಟತೆ ಗೆ, there were no parameters!
It's my love that has
never lost,
B'cos it has never
tried to win!!
ನನ್ನ ಓದು ಮುಗಿಯುವ ಹೊತ್ತಿಗೆ ನಾನೊಬ್ಬ ಅಪ್ಪಟ ಪ್ರೇಮಿಯಂತಾಗಿಬಿಟ್ಟಿದ್ದೆ!
इतनी ही मोहब्बत करनी आती मुझे,
यही है मेरी मोहब्बत!
ನನ್ನ ಪರೀಕ್ಷೆ, ತಲ್ಲಣಗಳೆಲ್ಲ ಉಗಿದು ಆಸ್ಟ್ರೇಲಿಯ ದ MNC ಗೆ ಕೆಲಸಕ್ಕೆ ಸೇರಿದ ಮೊದಲ ಸಂಬಳದಲ್ಲಿ ಮಾಡಿದ ಮೊದಲ ಕೆಲಸವೆಂದರೆ, ಅಮ್ಮನಿಗೆ ತಂದ ಬೆಳ್ಳಿ ಕುಂಕುಮದ ಭರಣಿ ಹಾಗು ನಿನಗೆ, ಕಿರು ಕಾಲಗೆಜ್ಜೆ. ನಿನ್ನ ಬೆಳ್ಳಿ ಪಾದಗಳಲ್ಲಿ, they look amazing ! ನನ್ನ ಕಿವಿಯಲ್ಲಿರುವ ಇನಿದಾದ ಸಂಗೀತ ನೀನು!
ಗೌತಮಿ, ನಮ್ಮ ದಾಂಪತ್ಯದ ಪ್ರೀತಿಯಲ್ಲಿ ಮೋಹವಿರಲಿ, ಸ್ನೇಹವಿರಲಿ ನಿಶಿಥವಾದ ವಾಂಛಲ್ಯವಿರಲಿ! ನಿನ್ನ ಪುಟ್ಟ ಕುಂಕುಮದ ಹಣೆಗೆ ನನ್ನ ಹೂಮುತ್ತು. ಕೈಯಲ್ಲಿ ಬೆಚ್ಚಗಿನ ಕಾಫಿ ಇದೆ! ನನ್ನೊಳಗೆ, ನಿತಾಂತವಾದ, ಅಚಲವಾದ ಪ್ರೀತಿ ಹರಿಯುತಿರಲಿ, ಅನವರತ !!
- ನಿನ್ನವನು.