Monday, May 4, 2009

ವಾಂಛೆಯ ಶಿಖರಗಳ ಮೇರೆ ಮೀರಿ.....

ಲೈಬ್ರರಿಯಲ್ಲಿ ಸಿಕ್ಕ ಹುಡುಗಿ,

ಎಲ್ಲಿದ್ದೆ ಇಷ್ಟು ದಿನ? ಫಕೀರನೊಬ್ಬನಿಗೆ ಧಿಡೀರನೆ ಲಕ್ಷ ರೂಪಾಯಿ ಸಿಕ್ಕಂತೆ! ಲೈಬ್ರರಿಗೆ ಒಂದು ದಿನವೂ ಬರದ ನನಗೆ ಯಾವುದೋ ಅನಾಮಧೇಯ ಪುಸ್ತಕದೊಳಗೆ ಪ್ರೇಮಪತ್ರ ಸಿಕ್ಕಂತೆ ನೀನು! ಎಲ್ಲವೂ ಕೆಮಿಸ್ಟ್ರಿ ಲೆಕ್ಚರರ್ ನ ದೆಸೆ. ನಿನ್ನೆ ಕೊಟ್ಟಿದ್ದ assignments ಎಲ್ಲ ಮರೆತು ಯಾವುದೋ ಹಳೆಯ ಕ್ರಿಕೆಟ್ ಮ್ಯಾಚ್ ನ ನೋಡುತ್ತಾ ಕುಳಿತಿದ್ದೆ. ಸಂಜೆಯೊಳಗೆ ಬರೆದು ತಂದುಕೊಡು ಎಂಬಂತೆ ಗದರಿದ್ದರು. ಗೆಳೆಯರೆಲ್ಲ ಕ್ಲಾಸಿನೊಳಗಿದ್ದಾರೆ. ನಾನೇನು ಮಾಡಲಿ? ಸುಮ್ಮನೆ ಲೈಬ್ರರಿಗೆ ಬಂದರೆ ಸಿಕ್ಕವಳೇ ನೀನು! ಚಾಂದ್!! ಕೆಮಿಸ್ಟ್ರಿ,assignments ಉ ಎಲ್ಲವೂ ಮರೆತು ಹೋದೆ. And...I ಜಸ್ಟ್ got lost! ನೀನು, ನಿನ್ನ ಗೆಳತಿಯರ ಜೊತೆ ನಡೆದು ಹೋದರೆ ನಿನ್ನ ಹೆಜ್ಜೆಯ ಸಪ್ಪಳಕ್ಕೆ ನನ್ನ ಎದೆಯೊಳಗೆ ನಿನ್ನ ಗೆಜ್ಜೆಯ ನಿನಾದ. ನನ್ನ ಕನಸಿನಲ್ಲಿ ಅಗಾಗ ಬರುತ್ತಿದ್ದ ಹುಡುಗಿ, ನೀನಾ ಅದು? ನಿನ್ನ ನೋಡಿ ನಾನು ಸ್ಥಬ್ದ-ಸ್ಥಬ್ದ! ಆ ಜೇನಿನಂಥ ಕಣ್ಣು, ಮೋಡದ ಹನಿಯಲ್ಲಿ ಅದ್ದಿದಂಥ ತುಟಿ,ನಿನ್ನ ಕೆಂಪು ಕೆನ್ನೆಯ ಸಣ್ಣ ಗುಳಿ-ನಾನಲ್ಲಿ ಬಿದ್ದು ಪ್ರಾಣ ಕಳೆದುಕೊಂಡುಬಿಡಲಾ?

ಹೆಸರು-ಶರ್ಮಿಳ, ಮನೆಯಿರುವುದು ರಥ ಬೀದಿಯ ಗೋಪಾಲ ಶೆಟ್ಟರ ಕಾಫಿ ಪುಡಿ ಅಂಗಡಿಯ ಎದರು, ಅಪ್ಪ- LIC ಯ HOD, ಅಮ್ಮನಿಗೆ ನೀನೊಬ್ಬಳೆ ಮುದ್ದಿನ ಮಗಳು, ನಿಂಗೆ ಪಿಂಕ್ ಬಣ್ಣ ಅಂದ್ರೆ ಇಷ್ಟ-ಇಷ್ಟ, ಪಾನಿಪೂರಿ ಅಂದ್ರೆ ಬಾಯಲ್ಲಿ ನೀರು, ಶಾರುಖ್ ಖಾನ್ ಅಂದ್ರೆ ಪಂಚ ಪ್ರಾಣ, ಅವ್ನ ಎಲ್ಲ ಫಿಲಂನೂ ನೋಡ್ತೀಯ- ಇಷ್ಟೆಲ್ಲಾ ಸುದ್ಧಿ ನಂಗೆ ಹೇಳಿದ್ದು, ನನ್ನ ತಂಗಿ ಸಂಜನ. ನನಗಿಂತಲೂ ಹೆಚ್ಚು ಪ್ರೀತಿಸಿದ್ದು, ನನ್ನ ತಂಗಿ ಸಂಜನಳನ್ನ.ನೀನು ಬಂದೆ ನೋಡು. ನನ್ನ ಜಗತ್ತೇ ಬದಲಾಗಿ ಹೋಯಿತು. ನಮ್ಮ ಕಾಲೇಜಿಗೆ ಬಂದ ಹೊಸ ಹುಡುಗಿ ನೀನು.ನಾವು ನೀಡಿದ welcome party ಯಲ್ಲಿ ನೀನೆಲ್ಲಿದ್ದೆ ಹುಡುಗಿ?

ಮನೆಗೆ ಬಂದೊಡನೆ ಅಮ್ಮನಿಗೆ ಪ್ರವರದ ಹಾಗೆ ಎಲ್ಲವೂ ಒಪ್ಪಿಸಿದೆ.ನಿನ್ನನ್ನು ಲೈಬ್ರರಿಯಲ್ಲಿ ನೋಡಿದ್ದು, ನೋಡಿ ಮೂಕವಿಸ್ಮಿತನಾಗಿದ್ದು...ಎಲ್ಲ. 'ಇವನಿನ್ನೂ ಹುಡುಗು ಮುಂಡೇದು...' ಅಂದುಕೊಂಡರು ಅಮ್ಮ. ಅಮ್ಮ,ನನ್ನ ಪಾಲಿನ best friend! ನನ್ನೆಲ್ಲ ಬದಲಾವಣೆಗಳನ್ನ ಅಮ್ಮ ಸೂಕ್ಷ್ಮವಾಗಿ ಗಮನಿಸುತ್ತಾಳೆ. ಅಪ್ಪನ ಬ್ಯಾಂಕಿನ accounts ನಂಗೆ ಅರ್ಥವಾಗುವುದಿಲ್ಲ. ಅವತ್ತಿನ ರಾತ್ರಿ ನಾನು ಮಾಡಿದ ಮೊದಲ ಕೆಲಸವೆಂದರೆ,ನಿನಗೆ ಬರೆದ ಪತ್ರ. ಪತ್ರ ಬರೆದ ಮೇಲೆ ಏನು ಮಾಡಬೇಕೋ ತಿಳಿಯಲಿಲ್ಲ. ನನ್ನ ಪ್ಯಾಂಟಿನ ಜೇಬಿನೊಳಗೆ ಇಟ್ಟುಕೊಂಡು ಮಲಗಿ ಬಿಟ್ಟೆ!ಸಂಜನಾ,ಬೆಳ್ಳಂ ಬೆಳಿಗ್ಗೆ ಸಂಗೀತ ಕಲಿಯಲು, ರಥಬೀದಿಯ ಆಚೆಯಿರುವ ಸಂಗೀತ ಶಾಲೆಗೆ ಬರುತ್ತಾಳೆ.ನೀನಾಗಲೇ ನಿನ್ನ ಅರಿಶಿನ ಸ್ನಾನ ಮುಗಿಸಿರಬಹುದು. ಪತ್ರವನ್ನು ತಂಗಿಯ ಕೈಲಿ ಕೊಟ್ಟು ಕಳುಹಿಸಿದ್ದೇನೆ.ಇವತ್ತಿನ ತಿಳಿ ಮಧ್ಯಾನ ಅದೇ ಲೈಬ್ರರಿಯ ಮೆಟ್ಟಿಲ ಮೇಲೆ ಕಾದಿರುತ್ತೇನೆ,ನಿನ್ನ ಉತ್ತರಕ್ಕಾಗಿ. ಒಂದು ಸಣ್ಣ ಕಿರುನಗೆಯ ಒಪ್ಪಿಗೆ ಕೊಟ್ಟುಬಿಡು,ನಾನೆಲ್ಲೋ ವಾಂಛೆಯ ಶಿಖರಗಳ ಮೇರೆ ಮೀರಿ......

- ನಿನ್ನವನು.

5 comments:

ShilpaKumar said...

shubra swaccha sihi sihi bhava....super...nijvagalu a shammi tumba lucky....

preethiya thammana e bhavanegala sagarada aleya sparshisda e akka nijakku lucky...

:) no words :)

Anonymous said...

Manada Bhavada Baravanige
E biru besige kaladalli
aduve namage tampu beesanige
Munduvaresu ninna lekhnana gala Meravanige

Regards
Anand Sharma

ಯುವಪ್ರೇಮಿ said...

Waaaaw....! tumba channagide nimma Baravanigegalu.....!!

adu sari eee Shammi yaaru !! :)

Vinay Vasudeva said...

Good one kano.,as usual,
its like lava laveeke in hai bangalore, u write same love letters., try different one., like ur own experience :)
v do like a change from u.,

Unknown said...

Hey Viny, Tumba ne chennagi bardidya kano. Yaaro Adu, Sharmila...?! Hahaha...
Keep rocking kano...
-Ramya...